ಸಾರಿಗೆ ನೌಕರರ ಮೇಲೆ ಕೊನೆಯ ಅಸ್ತ್ರ: ಏನಿದು ಎಸ್ಮಾ ಕಾಯ್ದೆ?

373

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಸಾರಿಗೆ ನೌಕರರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸ್ತಿದ್ದಾರೆ. ತಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಕೆಎಸ್ಆರ್ ಟಿಸಿ, ವಾಯುವ್ಯ, ನೈರುತ್ಯ, ಈಶಾನ್ಯ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕರು ಮುಷ್ಕರ ನಡೆಸಿದ್ದಾರೆ.

ಸಾರಿಗೆ ಸಚಿವರ ಜೊತೆಗೆ ಈಗಾಗ್ಲೇ ನಡೆದ ಮಾತುಕತೆ ವಿಫಲವಾಗಿದ್ದು, ಹೋರಾಟ ಮುಂದುವರೆಸಿದ್ದಾರೆ. ಹೀಗಾಗಿ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗಿದ್ದು, ಭಾನುವಾರ ಸಂಜೆಯವರೆಗೂ ಗಡವು ನೀಡಲಾಗಿದೆ.

ಏನಿದು ಎಸ್ಮಾ?

ಎಸ್ಮಾ ಅಂದ್ರೆ Essential services maintenance act ಅನ್ನೋದು. ಕನ್ನಡದಲ್ಲಿ ಅಗತ್ಯ ಸೇವೆ ನಿರ್ವಹಣೆ ಕಾಯ್ದೆ ಎಂದು ಕರೆಯಲಾಗುತ್ತೆ. ಸಾರ್ಕಾರಿ ನೌಕರರ ಮೇಲೆ ಅಂತಿಮವಾಗಿ ಹಿಡಿತ ಸಾಧಿಸುವ ಅಸ್ತವಿದು. ಇದು 1968ರಿಂದ ಜಾರಿಯಲ್ಲಿದೆ. 1994ರಿಂದ ಕರ್ನಾಟಕದಲ್ಲಿದೆ. ಜೂನ್, 2013ರಿಂದ ಕಾನೂನು ಬಳಕಗೆ ಅವಕಾಶ ಸಿಕ್ಕಿದೆ. ಮುಂದೆ 2015ರಲ್ಲಿ ಕೆಲ ತಿದ್ದುಪಡಿ ಮಾಡಲಾಯ್ತು.

ಎಸ್ಮಾ ಜಾರಿ ಮಾಡೋದು ಯಾವಾಗ?

ಸರ್ಕಾರಿ ನೌಕರರು ಸಾಮೂಹಿ ಹೋರಾಟಕ್ಕೆ ಮುಂದಾಗಿ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿದ್ರೆ ಎಸ್ಮಾ ಜಾರಿ ಮಾಡಲಾಗುತ್ತೆ. ಆಹಾರ, ಶಿಕ್ಷಣ, ಆರೋಗ್ಯ, ಸಾರಿಗೆ, ಭದ್ರತೆ ಸೇರಿದಂತೆ ಅಗತ್ಯ ಸೇವೆಗಳಿಗೆ ತೊಂದರೆಯಾದ್ರೆ ಹಾಗೂ ಪೊಲೀಸ್ ವ್ಯವಸ್ಥೆಗೆ ದಕ್ಕೆ ತರುವ ಕೆಲಸ ನಡೆದ್ರೆ ಎಸ್ಮಾ ಜಾರಿ ಮಾಡಲಾಗುತ್ತೆ.

ಎಸ್ಮಾ ಜಾರಿಯ ಪರಿಣಾಮವೇನು?

ಎಸ್ಮಾ ಅನ್ನೋದು ಕಡ್ಡಾಯ ಎಂಬಂತೆ. ಸಂವಿಧಾನ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ, ಸಾರ್ವಜನಿಕರ ಸುವ್ಯವಸ್ಥೆ ಕುರಿತು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತೆ. ಹೀಗಾಗಿ ಇದನ್ನ ಉಲ್ಲಂಘನೆ ಮಾಡಿದ್ರೆ ಅಂಥವರ ವಿರುದ್ಧ ವಾರೆಂಟ್ ಇಲ್ಲದೆ ಬಂಧಿಸಬಹುದು. ಆರು ತಿಂಗಳು ಜೈಲು ಶಿಕ್ಷೆ ನೀಡಬಹುದು.

ಇದರ ಜೊತೆಗೆ ಉದ್ಯೋಗಿಯ ವೇತನ, ಭತ್ಯೆ, ಬಡ್ತಿ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತನಾಗುತ್ತಾನೆ. ಹೀಗಾಗಿ ಸರ್ಕಾರಿ ನೌಕರರ ಸಾಮೂಹಿಕ ಹೋರಾಟವನ್ನ ಮಟ್ಟ ಹಾಕಲು ಇದು ಕೊನೆಯ ಅಸ್ತ್ರವಾಗಿದೆ.




Leave a Reply

Your email address will not be published. Required fields are marked *

error: Content is protected !!