ಸಂಜೆ ಹೆಲ್ತ್ ಬುಲೆಟಿನ್: ರಾಜ್ಯದಲ್ಲಿಂದು 28 ಪ್ರಕರಣ

380

ಬೆಂಗಳೂರು: ಸಂಜೆ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು 6 ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಇಂದು ಒಟ್ಟು 28 ಕರೋನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅಲ್ಲಿಗೆ ಸೋಂಕಿತರ ಸಂಖ್ಯೆ 987 ಆಗಿದೆ.

ಸಂಜೆ ಬುಲೆಟಿನ್ ನಲ್ಲಿ ಬೀದರ 3, ಕಲಬುರಗಿ 2 ಹಾಗೂ ಮಂಡ್ಯದಲ್ಲಿ 1 ಕೇಸ್ ದಾಖಲಾಗಿದೆ. ಹೀಗಾಗಿ ಬೀದರ್ 7, ಮಂಡ್ಯ 4, ಬೆಂಗಳೂರು ನಗರ 5, ಗದಗ 4, ದಾವಣಗೆರೆ 2, ಬೆಳಗಾವಿ 1, ಬಾಗಲಕೋಟೆ 1 ಕೇಸ್ ದಾಖಲಾಗಿದೆ. 35 ಜನ ಸಾವನ್ನಪ್ಪಿದ್ದಾರೆ. ಇಂದು 9 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದರಲ್ಲಿ ಮೈಸೂರು 2, ಕಲಬುರಗಿ 2, ವಿಜಯಪುರ 1, ಬೆಂಗಳೂರು ನಗರ 2, ದಕ್ಷಿಣ ಕನ್ನಡ 2 ಜನರು ಡಿಸ್ಚಾರ್ಜ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!