ಫೇಸ್ ಬುಕ್ ನಲ್ಲಿ ಪರಿಚಯ.. ಎಲ್ಲವೂ ಕಳೆದುಕೊಂಡ ಠಾಣೆಗೆ ಬಂದಳು!

309

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗುವವರನ್ನ ನಂಬಿ ಮೋಸ ಹೋಗ್ತಿರುವುದು ಗೊತ್ತಿದ್ದು ಗೊತ್ತಿದ್ದು ಜನರು ಯಾಮಾರುತ್ತಿದ್ದಾರೆ. ಅದರಂತೆ ಚಿಂತಾಮಣಿ ನಿವಾಸಿಯೊಬ್ಬರು ಫೇಸ್ ಬುಕ್ ಮೂಲಕ ಪರಿಚಯವಾದ ವ್ಯಕ್ತಿಯನ್ನ ನಂಬಿ ಮೋಸ ಹೋಗಿದ್ದಾರೆ.

ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಗೆ ಫೇಸ್ ಬುಕ್ ಮೂಲಕ ಇಡ್ಲಿಪಾಳ್ಯ ನಿವಾಸಿ ಸತೀಶ ಪರಿಚಯವಾಗಿದೆ. ಅದು ಬರೀ ಪರಿಚಯವಾಗಿದ್ರೆ ಇಂದು ಮಹಿಳೆ ಬೀದಿಗೆ ಬಂದು ಮೋಸವಾಗಿದೆ. ನ್ಯಾಯ ಕೊಡಿಸಿ ಎಂದು ಠಾಣೆ ಮೆಟ್ಟಿಲು ಹತ್ತುವ ಪರಿಸ್ಥಿರಿ ಬರುತ್ತಿರಲಿಲ್ಲ. ಮದುವೆಯಾಗಿರುವ ಮಹಿಳೆ ಫೇಸ್ ಬುಕ್ ನಲ್ಲಿ ಪರಿಚಯವಾದವನ ಜೊತೆ ಸಲುಗೆ ಬೆಳೆಸಿಕೊಂಡು ದೈಹಿಕ ಸಂಪರ್ಕ ಸಹ ನಡೆದು ಹೋಗಿದೆ.

ಮಹಿಳೆಯೊಂದಿಗೆ ಎಲ್ಲ ರೀತಿಯಿಂದ ವರ್ತಿಸಿರುವ ಸತೀಶ, ಸೈಟ್ ಹಾಗೂ ಮನೆ ಮಾರಿಸಿ 15 ಲಕ್ಷ ರೂಪಾಯಿ ವಂಚಿಸಿದ್ದಾನಂತೆ. ಅಲ್ದೇ, ಖಾಸಗಿ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಬೆದರಿಕೆ ಹಾಕ್ತಿದ್ದಾನೆ ಎಂದು ಮಹಿಳೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!