ಸೆ.29ರ ತನಕ ಸಿಸಿಬಿ ವಶಕ್ಕೆ ವಂಚಕ ಆರೋಪಿ ಹಾಲಶ್ರೀ

222

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದ 3ನೇ ಆರೋಪಿಯಾಗಿರುವ ಹೊಸಪೇಟೆ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಮಂಗಳವಾರ ಬಂಧಿಸಲಾಗಿದೆ. ಕೋರ್ಟ್ ಗೆ ಹಾಜರು ಪಡಿಸಿದ ಮೇಲೆ ಸೆಪ್ಟೆಂಬರ್ 9ರ ತನಕ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.

ಸ್ವಾಮೀಜಿ ಪರ ವಕೀಲ ಲೋಕೇಶ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 29ರ ತನಕ ಆಕ್ಷೇಪಣಾ ಅರ್ಜಿ ಸಲ್ಲಿಸಲು ಸರ್ಕಾರ ವಕೀಲರಿಗೆ ಸೂಚಿಸಿ ಜಾಮೀನು ಅರ್ಜಿ ಕೋರ್ಟ್ ಮುಂದೂಡಿತು. ಬೆಂಗಳೂರಿನ ಚಂದ್ರಾಲೇಔಟ್ ಮನೆಯೊಂದರಲ್ಲಿ ಸ್ವಾಮೀಜಿ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅಲ್ಲಿಗೆ ಹೋಗಿ ಮಹಜರು ಮಾಡಲಿದ್ದಾರೆ.

ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿ 6 ಜನರ ಬಂಧನವಾಗುತ್ತಿದ್ದಂತೆ ಸ್ವಾಮೀಜಿ ವೇಷ ಮರೆಸಿಕೊಂಡು ಮೈಸೂರು ಮಾರ್ಗವಾಗಿ ಒಡಿಶಾ ಕಡೆ ತೆರೆಳಿದ್ದ. ವಿವಿಧ ಮಾರ್ಗ, ಬಸ್, ರೈಲು ಹೀಗೆ ಬೇರೆ ಬೇರೆ ವಾಹನದ ಮೂಲಕ ಸುತ್ತುತ್ತಾ ತಲೆ ಮೆರೆಸಿಕೊಂಡಿದ್ದ. ಭೋದ್ ಗಯಾ ರೈಲಿನಲ್ಲಿ ಹೊರಟಿದ್ದಾಗ ಒಡಿಶಾದ ಕಟಕ್ ನಲ್ಲಿ ಕರ್ನಾಟಕದ ಪೊಲೀಸರು ಬಂಧಿಸಿ ಕರೆದುಕೊಂಡು ಬಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!