ಗುಮ್ಮಟನಗರಿಯಲ್ಲಿ 2 ಕಡೆ ಲಕ್ಷಾಂತರ ಮೌಲ್ಯದ ಗಾಂಜಾ ಜಪ್ತಿ

450

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸ್ಯಾಂಡಲ್ ವುಡ್ ನಲ್ಲಿ ಇದೀಗ ಡ್ರಗ್ಸ್ ಚರ್ಚೆ ನಡೆಯುತ್ತಿದೆ. ಇದರಲ್ಲಿ ಕೆಲವರು ಗಾಂಜಾವನ್ನ ಡ್ರಗ್ಸ್ ಜೊತೆ ಸೇರಿಸಿಬೇಡಿ. ಗಾಂಜಾ ಬೇರೆ, ಡ್ರಗ್ಸ್ ನಲ್ಲಿ ಬರುವ ವಿವಿಧ ರೀತಿಯ ಮಾದಕ ವಸ್ತುಗಳು ಬೇರೆ ಎಂದು ಹೇಳ್ತಿದ್ದಾರೆ. ಇದರ ನಡುವೆಯೇ ಜಿಲ್ಲೆಯಲ್ಲಿ ಏಕಕಾಲದಲ್ಲಿ ಎರಡು ಕಡೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.

ನಿಡಗುಂದಿ ತಾಲೂಕಿನ ರಾಜನಾಳ ಜಮೀನಿನೊಂದರಲ್ಲಿ ಮೆಕ್ಕೆಜೋಳದೊಂದಿಗೆ ಬೆಳೆದಿದ್ದ 2 ಲಕ್ಷ ಮೌಲ್ಯದ 72ಕೆಜಿ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ರವಿ ವಾಲೀಕಾರನನ್ನ ವಶಕ್ಕೆ ಪಡೆದಿದ್ದು ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ವಿಜಯಪುರ ನಗರದ ಜಮಖಂಡಿ ನಾಕಾ ಬಳಿಯ ಜಮೀನಿನಲ್ಲಿ ಬೆಳೆದ 15 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಆರೋಪಿ ಕಾಂತು ನಾಯಕನನ್ನ ಬಂಧಿಸಲಾಗಿದೆ. ಈ ಕುರಿತು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗೆ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ಇಬ್ಬರನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!