ನ್ಯೂ ಇಯರ್ ಸಂಭ್ರಮ: ಎಣ್ಣೆ ಪ್ರಿಯರಿಗೆ ಇನ್ನಷ್ಟು ಕಿಕ್

341

ಬೆಂಗಳೂರು: ಇಂದು ಮಧ್ಯರಾತ್ರಿಯಿಂದ ನ್ಯೂ ಇಯರ್ ಸಂಭ್ರಮ ಜೋರಾಗಿರುತ್ತೆ. ಮೆಟ್ರೋ ಸಿಟಿಗಳು ಸೇರಿದಂತೆ ಪ್ರತಿಯೊಂದು ನಗರಗಳಲ್ಲಿ ಭರ್ಜರಿ ತಯಾರಿ ನಡೆದಿದೆ. ಇದರ ನಡುವೆ ಎಣ್ಣೆ ಪ್ರಿಯರಿಗೆ ಇನ್ನಷ್ಟು ಕಿಕ್ ಕೊಡುವ ಸುದ್ದಿಯೊಂದಿದೆ.

ಇಂದು ಮಧ್ಯರಾತ್ರಿ 2ಗಂಟೆಯ ತನಕ ಮಧ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಅಬಕಾರಿ ಸಚಿವ ಹೆಚ್.ನಾಗೇಶ ಹೇಳಿದ್ದು, ಬಡವರು, ಮಧ್ಯಮ ವರ್ಗದವರು ಹೆಚ್ಚು ಬಳಸುವ ಡ್ರಿಂಕ್ಸ್ ಮೇಲೆ ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರಾತ್ರಿ 1ಗಂಟೆಯ ತನಕ ಡ್ರಿಂಕ್ಸ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಅದನ್ನು 2ಗಂಟೆಯ ತನಕ ವಿಸ್ತರಿಸಲಾಗಿದೆ. 7 ಲೈಸನ್ಸ್ ಇರುವವರಗೆ 2 ಗಂಟೆಯ ತನಕ ಅವಕಾಶ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!