ಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಮಾರ್ಗಸೂಚಿ

182

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕೆ ಇನ್ನು 5 ದಿನಗಳು ಮಾತ್ರ ಉಳಿದಿವೆ. ಹೀಗಾಗಿ ಈಗಾಗ್ಲೇ ಎಲ್ಲರೂ ಪಾರ್ಟಿ ಪ್ಲಾನ್ ಮಾಡಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಪಾರ್ಟಿ ಜೋರಾಗಿರುತ್ತೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು,  ಸ್ಟಾರ್ ಹೋಟೆಲ್, ಪಬ್, ಕ್ಲಬ್ ಇರುವ ಏರಿಯಾಗಳಲ್ಲಿ ಬಂದೋಬಸ್ತಿ ನಿಯೋಜಿಸಲಾಗಿದೆ. ಜನಸಂದಣಿ ಇರುವ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿ ಮಾಡಲಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರೋಡ್, ಟ್ರಿನಿಟ್ ರೋಡ್, ಕಬ್ಬನ್ ಪಾರ್ಕ್, ಫಿನಿಕ್ಸ್ ಮಾಲ್, ಕ್ಲಬ್ ಸುತ್ತಮುತ್ತ ಪೊಲೀಸ್ ಪಡೆ ಇರುತ್ತೆ ಎಂದಿದ್ದಾರೆ.

ಮಹಿಳೆಯರ ಸುರಕ್ಷತೆಗೆ ಸೇಫ್ ಟೀಂ ಐಲ್ಯಾಂಡ್ ನಿಯೋಜಿಸಲಾಗುತ್ತಿದೆ. ಡ್ರಗ್ಸ್ ಸೇವನೆಗೆ ಕಡಿವಾಣ ಹಾಕಲಾಗುತ್ತಿದ್ದು, ಈಗಾಗ್ಲೇ ಡ್ರಗ್ಸ್ ಪೆಡ್ಲರ್ ಗಳ ಬಂಧನವಾಗಿದೆ. ರಾತ್ರಿ 1 ಗಂಟೆಯ ತನಕ ಮಾತ್ರ ವರ್ಷಾಚರಣೆಗೆ ಅವಕಾಶ. 1 ಗಂಟೆಗೆ ಎಲ್ಲವೂ ಬಂದ್ ಆಗಬೇಕು. ಪ್ಲೈ ಓವರ್ ಗಳ ಮೇಲೆ ಸಂಚಾರ ನಿರ್ಬಂಧ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿ, 160 ಇನ್ಸ್ ಪೆಕ್ಟರ್, 600 ಸಬ್ ಇನ್ಸ್ ಪೆಕ್ಟರ್, 600 ಎಎಸ್ಐ, 1,800 ಹೆಡ್ ಕಾನ್ಸ್ ಟೇಬಲ್, 5,200 ಕಾನ್ಸ್ ಟೇಬಲ್ ಗಳನ್ನು ನೇಮಿಸಲಾಗುತ್ತಿದೆ ಅಂತಾ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!