ಭೂಸೇನೆಗೆ ನೂತನ ಸಾರಥಿ

370

ನವದೆಹಲಿ: ಲೆಫ್ಟಿನೆಂಟ್ ಜನರಲ್ ಮನೋಜ ಮುಕುಂದ್ ನರವಣೆ ಅವರು ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭೂ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪನ್ ರಾವತ್ ಅವರ ಅಧಿಕಾರ ಇಂದಿಗೆ ಕಂಪ್ಲೀಟ್ ಆಯ್ತು. ಆದ್ರೆ, ಜನರಲ್ ಬಿಪಿನ್ ರಾವತ್ ಅವರನ್ನ ಮೂರು ಸೇನೆಗಳ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು ಸಹ ಇವತ್ತು ಅಧಿಕಾರ ಸ್ವೀಕರಿಸಿದ್ರು.

ಭಾರತೀಯ ಸೇನೆಯಲ್ಲಿ 37 ವರ್ಷದ ಅನುಭವ ಹೊಂದಿರುವ ನರವಣೆ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಇಂಡಿಯನ್ ಮಿಲಿಟರಿ ಅಕಾಡಮಿ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. ಕಣಿವೆ ನಾಡು ಹಾಗೂ ಈಶಾನ್ಯ ರಾಜ್ಯಗಳಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹೆಸರು ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!