ಗ್ರಾ.ಪಂ ಚುನಾವಣೆ ದಿನಾಂಕ ಘೋಷಣೆ

299

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವೇಳಾಪಟ್ಟಿಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ 13-12-2021 (ಸೋಮವಾರ), ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು 17-12-2021 (ಶುಕ್ರವಾರ), ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ ಎಂದರು.

ಸಿಂದಗಿ ತಾಲೂಕಿನ ಬಂದಾಳ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆ : 26, ಕನ್ನೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆ : 14 ಆಗಿರುತ್ತದೆ. ವಿಜಯಪುರ ತಾಲೂಕಿನ ಐನಾಪೂರ, ಆಲಮೇಲ ತಾಲೂಕಿನ ಬಗಲೂರ, ಸಿಂದಗಿ ತಾಲೂಕಿನ ಹಂದಿಗನೂರ, ರಾಂಪೂರ, ಪಿ.ಎ, ಚಡಚಣ ತಾಲೂಕಿನ ನಿವರಗಿ, ಬಬಲೇಶ್ವರ ತಾಲೂಕಿನ ಬೋಳ ಚಿಕ್ಕಲಕಿ, ತಿಕೋಟಾ ತಾಲೂಕಿನ ಹೊನವಾಡ, ನಿಡಗುಂದಿ ತಾಲೂಕಿನ ಇಟಗಿ, ವಂದಾಲ, ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ, ರಕ್ಕಸಗಿ, ಇಂಡಿ ತಾಲೂಕಿನ ಅಗರಖೇಡ, ಕ್ಯಾತನಕೇರಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯ ಸ್ಥಾನಗಳ ಸಂಖ್ಯೆ ತಲಾ 1 ಆಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!