ಪರಿಷತ್ ಫೈಟ್: ಸಿಂದಗಿ-ಆಲಮೇಲದಲ್ಲಿ ನೂರಕ್ಕೆ ನೂರರಷ್ಟು ಮತದಾನ

230

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧಾನ ಪರಿಷತ್ ಚುನಾವಣೆ ಸಂಬಂಧ ಇಂದು ಮತದಾನ ನಡೆಯಿತು. ಮುಂಜಾನೆ 8ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಿತು. ಸಿಂದಗಿ ಹಾಗೂ ಆಲಮೇಲ ತಾಲೂಕು ವ್ಯಾಪ್ತಿಯಲ್ಲಿ ಶೇಕಡ 100ಕ್ಕೆ 100ರಷ್ಟು ಮತದಾನವಾಗಿದೆ. 208 ಪುರುಷ ಹಾಗೂ 242 ಮಹಿಳಾ ಸದಸ್ಯರು ಸೇರಿದಂತೆ ಒಟ್ಟು 450ಕ್ಕೆ 450 ಸದಸ್ಯರು ಮತದಾನ ಮಾಡಿದ್ದಾರೆ.  

ಕೋರಹಳ್ಳಿ, ಗಬಸಾವಳಗಿ, ದೇವಣಗಾಂವ, ದೇವರನಾವದಗಿ, ಬೊಮ್ಮನಹಳ್ಳಿ, ರಾಮನಹಳ್ಳಿ, ಸಿಂದಗಿ, ಗೋಲಗೇರಿ, ಯಂಕಂಚಿ, ಸುಂಗಠಾಣ, ಹಿಕ್ಕನಗುತ್ತಿ, ಹೊನ್ನಳ್ಳಿ, ಹಂದಿಗನೂರು, ರಾಂಪೂರ ಪಿಎ, ಬ್ಯಾಕೋಡ, ನಾಗಾವಿ ಬಿ.ಕೆ, ಚಟ್ಟರಕಿ, ಗುಬ್ಬೇವಾಡ, ಕೊಕ್ಕಟನೂರ, ಮೋರಟಗಿ, ಮಲಘಾಣ, ಬಗಲೂರ, ಕಡಣಿ, ಕಕ್ಕಳಮೇಲಿ ಸೇರಿದಂತೆ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇಕಡ 100ಕ್ಕೆ 100ರಷ್ಟು ಮತದಾನವಾಗಿದೆ. ಡಿಸೆಂಬರ್ 14ಕ್ಕೆ ಫಲಿತಾಂಶ ಹೊರಬೀಳಲಿದೆ.




Leave a Reply

Your email address will not be published. Required fields are marked *

error: Content is protected !!