ವಿಜಯಪುರದ ‘ಗ್ರಾ.ಪಂ’ಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆಯ ಕಂಪ್ಲೀಟ್ ಮಾಹಿತಿ

342

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಇದೀಗ ಏನಿದ್ರೂ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಇದನ್ನ ಚುನಾಯಿತ ಸದಸ್ಯರ ನಡುವೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ದಿನಾಂಕ, ಸಮಯ ಹಾಗೂ ಸ್ಥಳ ನಿಗದಿ ಮಾಡಿದೆ.

ಜಿಲ್ಲೆಯ 12 ತಾಲೂಕಿನ ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಜನವರಿ 16 ರಿಂದ 24ರ ತನಕ ಈ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಅದರಂತೆ ತಾಲೂಕುವಾರು ಮಾಹಿತಿ ಇಲ್ಲಿದೆ ನೋಡಿ..

ಜನವರಿ 16, ಬೆಳಗ್ಗೆ 11ಕ್ಕೆ ಕೊಲ್ಹಾರ ತಾಲೂಕಿನ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಕೊಲ್ಹಾರದ ಶಾದಿ ಮಹಲ್ ನಲ್ಲಿ ನಡೆಯಲಿದೆ. ಇದೆ ದಿನ ಮಧ್ಯಾಹ್ನ 3ಗಂಟೆಗೆ ನಿಡಗುಂದಿ ತಾಲೂಕಿಗೆ ಸಂಬಂಧಿಸಿದಂತೆ, ಮುದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಜನವರಿ 17ರಂದು ತಿಕೋಟಾ(ಹಾಜಿಮಾಸ್ತಾನ ಶಾದಿ ಮಹಲ್) ಬೆಳಗ್ಗೆ 11 ಗಂಟೆಗೆ ಹಾಗೂ ಬಬಲೇಶ್ವರ(ಹರಳಯ್ಯನ ಗುಂಡ ಸಮುದಾಯ ಭವನ, ಶೇಗುಣಸಿ ಗ್ರಾಮದ ಹತ್ತಿರ) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಜನವರಿ 18ಕ್ಕೆ ವಿಜಯಪುರ (ಕಂದಗಲ್ಲ ಹಣಮಂತರಾಯ ರಂಗಮಂದಿರ) ಬೆಳಗ್ಗೆ 11ಕ್ಕೆ ಮತ್ತು ಬಸವನ ಬಾಗೇವಾಡಿ (ಶ್ರೀ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನ, ಕೆಎಸ್ಆರ್ ಟಿಸಿ ಬಸ್ ಡಿಪೋ ಹತ್ತಿರ) ಮಧ್ಯಾಹ್ನ 3ಕ್ಕೆ ಜರುಗಲಿದೆ.

ಜನವರಿ 22ಕ್ಕೆ ಮುದ್ದೇಬಿಹಾಳ (ವಿಜಯ ಮಹಾಂತೇಶ ಮಂಗಲ ಕಾರ್ಯಾಲಯ) ಬೆಳಗ್ಗೆ 11ಕ್ಕೆ ಹಾಗೂ ತಾಳಿಕೋಟೆ ಮಧ್ಯಾಹ್ನ 3 ಗಂಟೆಗೆ (ಸಂಗಮೇಶ್ವರ ಕಲ್ಯಾಣ ಮಂಟಪ) ನಡೆಯಲಿದೆ. ಜನವರಿ 23ಕ್ಕೆ ಇಂಡಿ (ಶಾಂತೇಶ್ವರ ಮಂಗಲ ಕಾರ್ಯಾಲಯ) ಬೆಳಗ್ಗೆ 11ಕ್ಕೆ ಹಾಗೂ ಚಡಚಣ (ಗುರು ಕೃಪಾ ಭವನ) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಇನ್ನು ಜನವರಿ 24ರಂದು ಸಿಂದಗಿ (ಡಾ.ಭಾವಿಕಟ್ಟಿ ಕಲ್ಯಾಣ ಮಂಟಪ, ವಿಜಯಪುರ ರೋಡ್) ಬೆಳಗ್ಗೆ 11 ಗಂಟೆಗೆ ಮತ್ತು ದೇವರ ಹಿಪ್ಪರಗಿ (ಶ್ರೀ ಶ್ರೀ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪ) ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.

ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕ್ರಿಯೆಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಹಾಗೂ ಅವಧಿ ಪೂರ್ಣಗೊಳದೆ ಇರುವ ಸದಸ್ಯರು ಹಾಜರಿರಬೇಕು ಎಂದು ತಿಳಿಸಲಾಗಿದೆ. ಈ ವೇಳೆ ಕೋವಿಡ್ ನಿಯಮಗಳನ್ನ ಪಾಲಿಸಲು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!