ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

270

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಶನಿವಾರ ನಡೆಯಿತು. ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಶೀತಮ್ಮ ಮಲ್ಲಪ್ಪ ಕಟ್ಟಿಮನಿ(ಬೋರಗಿ), ಉಪಾಧ್ಯಕ್ಷರಾಗಿ ಮಾಂತೇಶ ಮಳ್ಳಿ(ಗುಬ್ಬೇವಾಡ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸದಸ್ಯ ಮಡಿವಾಳಪ್ಪಗೌಡ ಬಿರಾದಾರ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕಾರಣಕರ್ತರಾದ ಸರ್ವ ಸದಸ್ಯರಿಗೂ, ಹಿರಿಯರಿಗೂ ಧನ್ಯವಾದಗಳು ಎಂದರು.

ಬಿಜೆಪಿ ಮುಖಂಡ ಸಂತೋಷ ಪಾಟೀಲ(ಡಂಬಳ) ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಸದಸ್ಯರು ಕೂಡಿಕೊಂಡು ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅಂತಾ ಹೇಳಿದರು. ಈ ವೇಳೆ ಭಿಮನಗೌಡ ಪಾಟೀಲ ಬೋರಗಿ, ನಿತ್ಯಾನಂದ ಕಟ್ಟಿಮನಿ,  ಶ್ರೀ ಕಾಂತ ಬಿಜಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!