ಮಳೆರಾಯನಾಟ ಅಥಣಿ ರೈತರ ಗೋಳಾಟ

412

ಅಥಣಿ: ರೈತರು ಸಾಲ ಮಾಡಿ ದ್ರಾಕ್ಷಿ, ಪೇರು, ಪಪ್ಪಾಯಿ, ಮಾವು ಬೆಳೆದು ಇನ್ನೇನು ವ್ಯಾಪಾರ ಮಾಡುವ ಆಸೆಯಲ್ಲಿದ್ರು. ಆಗ ಕರೋನಾ ಲಾಕ್ ಡೌನ್ ಎಲ್ಲವನ್ನೂ ಉಲ್ಟಾ ಮಾಡಿತು. ಈಗ ಸ್ವಲ್ಪ ಲಾಕ್ ಡೌನ್ ಸಡಿಲಿಕೆ ಇರುವದರಿಂದ ಉಳಿದದ್ದನ್ನ ಕಾಪಾಡಿಕೊಳ್ಳಬೇಕು ಅಂದ್ರೆ, ಮಳೆರಾಯನ ಕಾಟ ಶುರುವಾಗಿದೆ. ಹೀಗಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಎರಡು ದಿನದಿಂದ ಸುರಿದ ಮಳೆಗೆ ತಾಲೂಕಿನ ಅಡಹಳ್ಳಿ, ಕೋಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಅಲ್ಲದೆ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿ ಅನೇಕ ಮನೆಗಳು ಬಿದ್ದಿವೆ. ಹೀಗಾಗಿ ಅಥಣಿ ಮಾಜಿ ಶಾಸಕ ಶಹಜಾನ ಡೊಂಗರಗಾಂವ ಹಾಗೂ ಕಳೆದ ಉಪ ಚುನಾವಣಾ ಅಭ್ಯರ್ಥಿ ಗಜಾನನ ಮಂಗಸೂಳಿ ಅವರು, ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದ್ರು.

ಬೆಳೆ ಹಾನಿ ಮತ್ತು ಮನೆ ಕಳೆದುಕೊಂಡವರಿಗೆ ಸರ್ಕಾರ ತಕ್ಷಣ ಸರ್ವೆ ಮಾಡಿ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೆವೆ ಎಂದು ಹೇಳಿದ್ರು. ಈ ವೇಳೆ ಅನೀಲ ಸುಣದೋಳಿ, ಶಿವಾನಂದ ಗುಡ್ಡಾಪೂರ, ಶ್ರೀಕಾಂತ ಪೂಜಾರಿ, ಸುನೀಲ ಸಂಖ, ಸಿದ್ದಾರ್ಥ ಸಿಂಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *

error: Content is protected !!