ಸರ್ಕಾರದ ವಿರುದ್ಧ ಕೈಗಾರಿಕೆ ಲಾಬಿ ಆರೋಪ: ಮಣಿವಣ್ಣನಗೆ ಹೊಸ ಹುದ್ದೆ

362

ಬೆಂಗಳೂರು: ಕೈಗಾರಿಕೆ ಲಾಬಿಗೆ ಮಣಿದು ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಣಿವಣ್ಣನರನ್ನ ನಿನ್ನೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ವಿಪಕ್ಷಗಳು ಸೇರಿದಂತೆ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗಿದೆ.

https://twitter.com/kartiks2607/status/1260084464178262016?s=20

ಕೈಗಾರಿಕೆಗಳ ಲಾಬಿಗೆ ಮಣಿದು ಅವರನ್ನ ವರ್ಗಾವಣೆ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದರ ನಡುವೆ ಇಂದು ಅವರಿಗೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

https://twitter.com/chetanabelagere/status/1260116360413110272?s=20

ಕಾರ್ಮಿಕರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿಯಾದ ಮಣಿವಣ್ಣನ್ ಅವರನ್ನ ವರ್ಗಾವಣೆ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮಣಿವಣ್ಣನ್ ಅವರು ಕಾರ್ಮಿಕ ಇಲಾಖೆಯಲ್ಲಿ ಇರಬೇಕು. ಅವರನ್ನ ಅದೆ ಜಾಗಕ್ಕೆ ಮರಳಿ ತನ್ನಿ ಎನ್ನಲಾಗ್ತಿದೆ. ಹೀಗಾಗಿ #BringBackManivannan ಅನ್ನೋ ಟ್ರೆಂಡ್ ಟ್ವೀಟರ್ ನಲ್ಲಿ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!