24 ಗಂಟೆಯಲ್ಲಿ ದಾಖಲೆಯ ಸೋಂಕಿತರ ಸಂಖ್ಯೆ: ದೇಶದ ಟಾಪ್ 10 ಕೋವಿಡ್ ರಾಜ್ಯಗಳಿವು

383

ನವದೆಹಲಿ: ಕೋವಿಡ್ 19 ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಲಾಕ್ ಡೌನ್ ತೆರವಿಗೆ ಇನ್ನು 3 ದಿನ ಬಾಕಿಯಿರುವಾಗ್ಲೇ ಇಂದು ದಾಖಲೆಯ ಏರಿಕೆ ಕಂಡಿದೆ. 24 ಗಂಟೆಯಲ್ಲಿ 1,993 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ದೇ, 73 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಇದುವರೆಗೂ 35 ಸಾವಿರದ 43 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಸಾವಿನ ಸಂಖ್ಯೆ ಕೂಡ 1,147 ಆಗಿದೆ. ರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕು ಹೊಂದಿರುವ ಟಾಪ್ 10 ರಾಜ್ಯಗಳು ಇಲ್ಲಿವೆ.

ನಂಬರ್ರಾಜ್ಯಸೋಂಕಿತರುಸಾವುಗುಣಮುಖ
01ಮಹಾರಾಷ್ಟ್ರ9,9154321,593
02ಗುಜರಾತ4,08219752
03 ದೆಹಲಿ3,4395109
04 ಮಧ್ಯಪ್ರದೇಶ2,660130461
05 ರಾಜಸ್ಥಾನ2,43851768
06 ಉತ್ತರ ಪ್ರದೇಶ2,20339513
07 ತಮಿಳುನಾಡು2,162271,210
08 ಆಂದ್ರಪ್ರದೇಶ1,40331321
09 ತೆಲಂಗಾಣ101226367
10 ಪಶ್ಚಿಮ ಬಂಗಾಳ 75212

ಇದು ದೇಶದಲ್ಲಿರುವ ಟಾಪ್ 10 ಕೋವಿಡ್ 19 ಹೊಂದಿರುವ ರಾಜ್ಯಗಳು. ಇದರಲ್ಲಿ ಕರ್ನಾಟಕ ಇಲ್ಲ ಅನ್ನೋದು ಖುಷಿಯ ವಿಚಾರ. ಆದ್ರೆ, ಪಶ್ಚಿಮ ಬಂಗಾಳದ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ ಅನ್ನೋದು ಮರೆಯಬಾರದು. ಹೀಗಾಗಿ ರಾಜ್ಯದ ಜನರು ಕೋವಿಡ್ 19 ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು.




Leave a Reply

Your email address will not be published. Required fields are marked *

error: Content is protected !!