ವರುಣನ ಆರ್ಭಟಕ್ಕೆ ಮೈಸೂರು-ಬೆಂಗಳೂರು ರಸ್ತೆ ಮುಳುಗಡೆ

214

ಪ್ರಜಾಸ್ತ್ರ ಸುದ್ದಿ

ರಾಮನಗರ: ಸೋಮವಾರ ಮುಂಜಾನೆಯಿಂದ ಜಿಲ್ಲೆಯಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದೆ. ಇದರ ಪರಿಣಾಮ, ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಮುಳುಗಡೆಯಾಗಿದೆ. ವಾಹನಗಳು ಸಂಪೂರ್ಣವಾಗಿ ಮುಳುಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿವೆ.

ಮುಂಜಾನೆಯಿಂದ ಸತತ 4 ಗಂಟೆಗಳ ಕಾಲ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಲ್ಲಿನ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಅನೇಕ ಕಡೆ ಶಾಲೆಗಳು, ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ.

ರಾಮನಗರ, ಬಸವನಪುರ, ಕನಕಪುರ ಸರ್ಕಲ್, ಬಿಳಗುಂಬ ಕ್ರಾಸ್ ಸೇರಿ ಅನೇಕ ಕಡೆ ನೀರು ತುಂಬಿಕೊಂಡಿವೆ. ನೀರಲ್ಲಿಯೇ ಕಾರು ಚಲಾಯಿಸಲು ಹೋದವರು, ಅರ್ಧದಲ್ಲೇ ಸಿಲುಕಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!