ಬಸ್ ಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಐವರ ದುರ್ಮರಣ

247

ಪ್ರಜಾಸ್ತ್ರ ಸುದ್ದಿ

ತಾಂಜಾವೂರ್: ಖಾಸಗಿ ಬಸ್ ವೊಂದಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಐವರು ಸಾವನ್ನಪ್ಪಿರುವ ಘಟನೆ, ತಮಿಳುನಾಡಿನ ತಾಂಜಾವೂರ್ ಜಿಲ್ಲೆಯ ವರಗೂರ್ ಬಳಿ ನಡೆದಿದೆ. ಅಲ್ದೇ 10 ಮಂದಿ ಗಾಯಗೊಂಡಿದ್ದಾರೆ.

ಲಾರಿಯನ್ನ ಓವರ್ ಟೇಕ್ ಮಾಡಲು ಹೋಗಿ ರಸ್ತೆಯಿಂದ ಕೆಳಗೆ ಬಸ್ ನ್ನ ಇಳಿಸಿದ್ದಾನೆ. ಆಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ. ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಗಾಯಾಳುಗಳನ್ನ ಸರ್ಕಾರಿ ವೈದ್ಯಕೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!