ಮುಖ್ಯಮಂತ್ರಿಯಾಗಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ

474

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜಭವನದಲ್ಲಿ ಸರಳವಾಗಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ, ಬನ್ವರಿಲಾಲ್ ಪುರೋಹಿತ ಅವರು ಗೌಪತ್ಯಾ ಪ್ರಮಾಣ ಪತ್ರ ಬೋಧಿಸಿದರು.

ಇನ್ನು ಸ್ಟಾಲಿನ್ ಜೊತೆಯಲ್ಲಿ 32 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಮೂಲಕ ದಶಕಗಳ ಬಳಿಕ ದ್ರಾವಿಡ ನೆಲದಲ್ಲಿ ಡಿಎಂಕೆ ಆಡಳಿತ ನಡೆಯುತ್ತಿದೆ. 2006ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಆಡಳಿತ ಸಚಿವರಾಗಿದ್ದರು.

ಇನ್ನು 2009ರಲ್ಲಿ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. 2018ರಲ್ಲಿ ಡಿಎಂಕೆ ಅಧ್ಯಕ್ಷ, ತಂದೆ ಎಂ ಕರುಣಾನಿಧಿ ನಿಧನರಾದರು. ಮುಂದೆ ಆಗಸ್ಟ್ 28, 2018ರಿಂದ ಡಿಎಂಕೆ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನ ಮುನ್ನಡೆಸಿಕೊಂಡು ಬರ್ತಿದ್ದಾರೆ. 234 ಸ್ಥಾನಗಳಲ್ಲಿ 133 ಕ್ಷೇತ್ರಗಳಲ್ಲಿ ಡಿಎಂಕೆ ಗೆಲುವು ಸಾಧಿಸಿದೆ.




Leave a Reply

Your email address will not be published. Required fields are marked *

error: Content is protected !!