ನಾವು ನಿಮಗೆ ಲಸಿಕೆ ನೀಡಿದ್ದೇವೆ, ನೀವು ನಮಗೆ ಮತ ನೀಡಿ: ಜೆ.ಪಿ ನಡ್ಡಾ

220

ಪ್ರಜಾಸ್ತ್ರ ಸುದ್ದಿ

ಬಿಲಾಸ್ಪುರ್: ನಾವು ನಿಮಗೆ ಕೋವಿಡ್ ಲಸಿಕೆ ನೀಡಿದ್ದೇವೆ. ನೀವು ನಮಗೆ ಮತ ನೀಡಿ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಆರೋಗ್ಯದ ಹಕ್ಕನ್ನು ರಾಜಕೀಕರಣ ಮಾಡಿದ್ದಾರೆ. ಮುಂಬರುವ ಹಿಮಾಚಲ ಪ್ರದೇಶ ಚುನಾವಣೆ ಸಂಬಂಧ ಬುಧವಾರ ಈ ರೀತಿಯಾಗಿ ಮಾತನಾಡಿದ್ದಾರೆ.

ತವರು ಜಿಲ್ಲೆಯಾದ ಬಿಲಾಸ್ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತನಾಡಿದ ಜೆ.ಪಿ ನಡ್ಡಾ, ಪ್ರಧಾನಿ ಮೋದಿಜಿ 9 ತಿಂಗಳಲ್ಲಿ ದೇಶದಲ್ಲಿಯೇ 2 ಲಸಿಕೆಗಳನ್ನು ತಯಾರಿಸಿದರು. ನಿಮ್ಮೆಲ್ಲರಿಗೂ ಡಬಲ್ ಡೋಸ್, ಬೂಸ್ಟರ್ ಡೋಸ್ ಲಸಿಕೆ ನೀಡಿ ರಕ್ಷಿಸಿದ್ದಾರೆ. ನೀವು ನಮಗೆ ಮತ ನೀಡಿ ಎಂದಿದ್ದಾರೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಫೆಬ್ರವರಿ 12ರಂದು ಚುನಾವಣೆ ನಿಗದಿಯಾಗಿದೆ.




Leave a Reply

Your email address will not be published. Required fields are marked *

error: Content is protected !!