ಹಾಕಿ ವಿಶ್ವಕಪ್ ನಲ್ಲಿ ಭಾರತಕ್ಕೆ ಮೊದಲ ಗೆಲುವು

203

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೆರಸ್ಸಾ: ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ತಂಡದ ನಾಯಕಿ ಸವಿತಾ ಪೂನಿಯಾ ಗಟ್ಟಿಯಾಗಿ ನಿಂತುಕೊಂಡು ಕೆನಡಾ ವಿರುದ್ಧ ಭರ್ಜರಿ ಗೆಲುವು ತಂದು ಕೊಟ್ಟಿದ್ದಾರೆ. 3-2 ಅಂತರದಲ್ಲಿ ಶೂಟೌಟ್ ನಲ್ಲಿ ಭಾರತ ಮಂಗಳವಾರ ಗೆಲುವು ಸಾಧಿಸಿತು.

ನಿಗದಿತ ಸಮಯದಲ್ಲಿ ಎರಡು ತಂಡಗಳು ತಲಾ ಒಂದು ಗೋಲು ಗಳಿಸಿದ್ದವು. 58ನೇ ನಿಮಿಷದಲ್ಲಿ ಭಾರತದ ಸಲೀಮಾ ಟೆಟೆ ಕೈ ಚಳಕ ತೋರಿಸಿ ಗೋಲು ಗಳಿಸಿದರು. ಹೀಗಾಗಿ ಮುಂದೆ ಶೂಟೌಟ್ ನಲ್ಲಿ ಭಾರತ ಮೇಲುಗೈ ಸಾಧಿಸಿ ವಿಜಯ ಪತಾಕೆ ಹಾರಿಸಿತು.

ಇನ್ನು ಟೀಂ ಇಂಡಿಯಾ 9-12ನೇ ಸ್ಥಾನ ನಿರ್ಧರಿಸುವಲ್ಲಿ ಮುಂದಿನ ಪಂದ್ಯ ಮುಖ್ಯವಾಗಿದೆ. ಬುಧವಾರ ರಾತ್ರಿ 8ಗಂಟೆಗೆ ಜಪಾನ್ ವಿರುದ್ಧ ಕಣಕ್ಕೆ ಇಳಿಯಲಿದೆ.




Leave a Reply

Your email address will not be published. Required fields are marked *

error: Content is protected !!