ಅಕ್ರಮವಾಗಿ ರೆಮಡಿಸಿವರ್ ಮಾರಾಟ: ವಿಜಯಪುರದಲ್ಲಿ ಐವರ ಬಂಧನ

337

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕೋವಿಡ್ 19 ಹಾವಳಿ ಹೆಚ್ಚಾಗಿದೆ. ರೋಗಿಗಳು ತುರ್ತಾಗಿ ರೆಮಡಿಸಿವರ್ ಇಂಜೆಕ್ಷನ್ ಬೇಕಾಗ್ತಿದೆ. ಆದ್ರೆ, ತಕ್ಷಣಕ್ಕೆ ಎಲ್ಲಿಯೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಕೆಲವರು ಅಕ್ರಮವಾಗಿ ಮಾರಾಟ ಮಾಡ್ತಿದ್ದಾರೆ. ಮಹಿಳೆಯೊಬ್ಬರ ಮೂಲಕ ಅಕ್ರಮವಾಗಿ ರೆಮಡಿಸಿವರ್ ಇಂಜೆಕ್ಷನ್ ಮಾರಾಟ ಮಾಡ್ತಿದ್ದ ಐವರನ್ನ ಬಂಧಿಸಲಾಗಿದೆ.

ದುಬಾರಿ ಬೆಲೆಗೆ ರೆಮಡಿಸಿವರ್ ಇಂಜೆಕ್ಷನ್ ಮಾರಾಟ ಮಾಡ್ತಿದ್ದ ಆನಂದ ಸೋಹನಲಾಲ್ ರುಣವಾಲ್, ಆದಿತ್ಯ ಅಣ್ಣಾರಾವ್ ಜೋಶಿ, ವಿಜಯ ಪ್ರಭಾಕರ ದೇಶಪಾಂಡೆ, ಶ್ರುತಿ ಮಹೇಶ ಹಡಪದ ಹಾಗೂ ಮಹ್ಮದ ಅಬ್ದುಲ ಆಲಂ ಮುಲ್ಲಾ ಎಂಬುವರನ್ನ ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಮನಗೂಳಿ ಅಗಸಿ ಕ್ರಾಸ್ ಬಳಿ ದಾಳಿ ನಡೆಸಿದ ಗುಮ್ಮಟನಗರಿ ಠಾಣೆ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಬಂಧಿತರಿಂದ 3,490 ಮೌಲ್ಯದ ಎರಡು ರೆಮಡಿಸಿವರ್ ಇಂಜೆಕ್ಷನ್ ಹಾಗೂ ನಾಲ್ಕು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಇನಾಮದಾರಗೆ ರೆಮಡಿಸಿವರ್ ಇಂಜೆಕ್ಷನ್ ನೀಡುವುದಾಗಿ ಆರೋಪಿ ಶೃತಿ ಭರವಸೆ ನೀಡಿದ್ಳು. ಹೀಗಾಗಿ ಪೊಲೀಸರು ತಂಡ ರಚಿಸಿ ಐವರನ್ನ ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!