ಐಎಂಎ ಕೇಸ್: ವಿಶೇಷ ಕೋರ್ಟ್ ಸ್ಥಾಪನೆಗೆ ಮನವಿ

335

ಬೆಂಗಳೂರು: ರಾಜ್ಯದ ಬಹುಕೋಟಿ ಹಗರಣ ಐಎಂಎ ಕೇಸಿಗೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ಸ್ಥಾಪನೆ ಮಾಡುವಂತೆ ಶಿವಾಜಿನಗರದ ಶಾಸಕ ರಿಜ್ವಾನ ಅರ್ಷದ ಮನವಿ ಮಾಡಿದ್ದಾರೆ. ಈಗಾಗ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಶೀಘ್ರವಾಗಿ ಈ ಕೇಸ್ ಮುಗಿದು ಜನಸಾಮಾನ್ಯರಿಗೆ ನ್ಯಾಯ ಸಿಗಲಿಯೆಂದು ವಿಶೇಷ ಕೋರ್ಟ್ ಸ್ಥಾಪನೆಗೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ಮನವಿ ಮಾಡಿದ್ದಾರೆ.

ಈ ಪ್ರಕರಣದಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಗ್ರಾಹಕರು ಸಂಕಷ್ಟ ಎದುರಿಸ್ತಿದ್ದಾರೆ. ಈಗ ವಿಚಾರಣೆ ನಡೆಸ್ತಿರುವ ಸ್ಪೆಷಲ್ ಕೋರ್ಟ್ ಬೇರೆ ಬೇರೆ ಪ್ರಕರಣಗಳ ಬಗ್ಗೆಯೂ ವಿಚಾರಣೆ ನಡೆಸ್ತಿದೆ. ಹೀಗಾಗಿ ಸಂಪೂರ್ಣ ವಿಚಾರಣೆ ನಡೆಸಲು ತುಂಬಾ ಟೈಂ ತೆಗೆದುಕೊಳ್ಳುತ್ತೆ. ಒಂದಿಷ್ಟು ಕಾಲಮಿತಿಯೊಳಗೆ ಪ್ರಕರಣ ಮುಗಿಯಬೇಕೆಂದು ಕೋರಿ ಶಾಸಕ ರಿಜ್ವಾನ ಅರ್ಷದ ಮನವಿ ಮಾಡಿದ್ದಾರೆ.

ಶಾಸಕ ರಿಜ್ವಾನ ಅರ್ಷದ

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಬಹುಕೋಟಿ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಇದರಲ್ಲಿ ಈ ಹಿಂದಿನ ಶಿವಾಜಿನಗರ ಶಾಸಕ ರೋಷನ ಬೇಗ ಸೇರಿದಂತೆ ಹಲವು ರಾಜಕಾರಣಿಗಳ ಹೆಸರು ಸಹ ಕೇಳಿ ಬಂದಿದೆ. ಬಳಿಕ ಅವರು ರಾಜೀನಾಮೆ ನೀಡಿದ್ರು. ಅಂದು ಈ ಪ್ರಕರಣವನ್ನ ಎಸ್ಐಟಿಗೆ ವಹಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ್ಮೇಲೆ ಇದನ್ನ ಸಿಬಿಐಗೆ ವಹಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!