ಮೂರು ಕಾಲಿನ ವಿಚಿತ್ರ ಕೋಳಿಮರಿ

1076

ಧಾರವಾಡ: ಸಾಮಾನ್ಯವಾಗಿ ಎಲ್ಲ ಕೋಳಿಗಳಿಗೆ ಎರಡು ಕಾಲುಗಳು ಇರುವುದನ್ನ ನೋಡಿರ್ತಿರಿ. ಆದ್ರೆ, ಇಲ್ಲಿರುವ ಕೋಳಿಮರಿಗೆ ಮೂರು ಕಾಲಿರುವುದು ಕಂಡು ಬಂದಿದೆ. ಧಾರವಾಡದ ಕೆಲಗೇರಿ ಬಳಿಯ ಮ್ಯಾಂಗೋ ಮ್ಯೂಡ್ಸ್ ದಾಬಾ ಎದುರಿನ ರೈತರೊಬ್ಬರ ಮನೆಯಲ್ಲಿರುವ ಕೋಳಿಮರಿಗೆ ಮೂರು ಕಾಲು ಇರುವುದು ಕಂಡು ಬಂಡಿದೆ. ಈ ವಿಚಿತ್ರ ಕೋಳಿಮರಿ ನೋಡಲು ಜನರು ಇವರ ಹೊಲಕ್ಕೆ ಬರುತ್ತಿದ್ದಾರೆ.

ನಾನು ಇದೆ ಮೊದಲ ಬಾರಿಗೆ ಇಂತಹ ಅಪರೂಪದ ಕೋಳಿಮರಿಯನ್ನ ನೋಡಿದ್ದೇನೆ. ಇದು ದೇವರಸೃಷ್ಟಿ ಅನ್ನೋದು ನಮ್ಮ ನಂಬಿಕೆ. ಹೀಗಾಗಿ ಯರಿಕೋಪ್ಪ ಗ್ರಾಮದಿಂದ ನಾನು ಮತ್ತು ನನ್ನ ಸ್ನೇಹಿತರು ಸೇರಿಕೊಂಡು ಕೋಳಿಮರಿ ನೋಡಲು ಇಲ್ಲಿಗೆ ಬಂದಿದ್ದೇವೆ.

ಬಸವರಾಜ ಹಿರೇಮನಿ, ಯರಿಕೋಪ್ಪ ಗ್ರಾಮಸ್ಥರು

ನಮ್ಮ ಮನೆಯಲ್ಲಿ ಹುಟ್ಟಿರುವ ಈ ಕೋಳಿಮರಿ ಬಹಳ ಅಪರೂಪವಾಗಿದೆ. ಅದನ್ನು ಯಾವುದೆ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ನಮ್ಮ ಮನೆಯಲ್ಲಿಯೇ ವಿಶೇಷ ಕಾಳಜಿ ವಹಿಸಿ ಇದನ್ನು ಸಾಕುತ್ತೇವೆ. ಸಧ್ಯ ಕೋಳಿಮರಿ ಆರೋಗ್ಯವಾಗಿದೆ.

ಇಲ್ ಮುದ್ದೀನ್ ಮಹ್ಮದ್ ಇಸಾಕ್ ಮೊರಬ , ರೈತರು

ರೈತ ಇಲ್ ಮುದ್ದೀನ್ ಮಹ್ಮದ್ ಇಸಾಕ್ ಮೊರಬ ಎಂಬುವರ ಫಾರ್ಮ್ ಹೌಸ್ ನಲ್ಲಿ ಈ ವಿಚಿತ್ರ ಕೋಳಿಮರಿ ಕಂಡು ಬಂದಿದೆ. ಇದು ಸುಮಾರು 16 ದಿನದ ಕೋಳಿಮರಿಯಾಗಿದೆ. ಕ್ವಾಬ್ ತಳಿಯ ಕೋಳಿಮರಿಯಾಗಿದ್ದು ಆರೋಗ್ಯದಿಂದ ಕೂಡಿದೆ. ಇದೆ ಮನೆಯಲ್ಲಿ ಸುಮಾರು 4 ತಿಂಗಳ ಹಿಂದೆ ಒಂಟಿ ಕಾಲಿನ ಕೋಳಿಮರಿ ಜನಿಸಿದ್ದು, ಅದು ಹದಿನೈದು ದಿನದೊಳಗೆ ಸಾವನ್ನಪ್ಪಿತು ಎಂದು ರೈತ ಮೊರಬ ಅವರು ತಿಳಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!