ಸೋಷಿಯಲ್ ಮೀಡಿಯಾದಲ್ಲಿ ‘ಪೈಲ್ವಾನ್’ ಬಗ್ಗೆ ಏನ್ ಹೇಳ್ತದ್ದಾರೆ?

516

ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ನಿನ್ನೆ ರಿಲೀಸ್ ಆಗಿದೆ. ಅಭಿನಯ ಚಕ್ರವರ್ತಿ ಅಭಿಮಾನಿಗಳು ಸಿನ್ಮಾವನ್ನ ಫುಲ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ, ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಿನ್ಮಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರಂತೆ.

ಚಿತ್ರ ಕಳಪೆಯಾಗಿದೆ ಅಂತ ಬರೆಯುತ್ತಿದ್ದು, ಇದು ಸುದೀಪ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಸುಖಾಸುಮ್ಮನೆ ಚಿತ್ರ ಸರಿಯಿಲ್ಲ ಅಂತಾ ಅಪಪ್ರಚಾರ ಮಾಡ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಸ್ತಿದ್ದಾರೆ. ಚಿತ್ರದ ಒಂದಿಷ್ಟು ದೃಶ್ಯಗಳನ್ನ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದನ್ನ ಹೇಳಬೇಡಿ ಅಂತಿದ್ದಾರೆ.

ಪೈಲ್ವಾನ್ ಮೂವಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅನ್ನೋದು ಫಸ್ಟ್ ಡೇ ಫಸ್ಟ್ ಶೋ ನೋಡಿದವರ ಅಭಿಪ್ರಾಯ. ಸಿನಿಮಾ ನೋಡಿದ ಸುದೀಪ ಅಭಿಮಾನಿಗಳು ಚಿತ್ರ ಚೆನ್ನಾಗಿದೆ ಅಂತಿದ್ದಾರೆ. ಆದ್ರೆ, ಕೆಲವರು ಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!