ಕಮಲ್ ಹಾಸನ್ ಚಿತ್ರದ ಶೂಟಿಂಗ್ ವೇಳೆ ಭಾರೀ ಅನಾಹುತ: ಮೂವರ ಸಾವು

407

ತಮಿಳು ಸಿನಿ ದುನಿಯಾದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಇಂಡಿಯನ್-2 ಚಿತ್ರದ ಶೂಟಿಂಗ್ ವೇಳೆ ಭಾರೀ ಅನಾಹುತವೊಂದು ನಡೆದಿದೆ. ಇದ್ರಿಂದಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಂಕರ ನಿರ್ದೇಶನದ ಇಂಡಿಯನ್-2 ಸಿನ್ಮಾ ಶೂಟಿಂಗ್ ವೇಳೆ ಕ್ರೇನ್ ಉರುಳಿ ಬಿದ್ದು ಸಹಾಯಕ ನಿರ್ದೇಶಕ ಸೇರಿ ಮೂವರು ಸಾವನ್ನಪ್ಪಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ.

ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ನಿನ್ನೆ ರಾತ್ರಿ ಶೂಟಿಂಗ್ ನಡೆಸಲಾಗಿತ್ತು. ಸೆಟ್ ರೆಡಿ ಮಾಡಲು ಕ್ರೇನ್ ಬಳಸಲಾಗಿತ್ತು. ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಆಗ ಸಹಾಯಕ ನಿರ್ದೇಶಕ ಕೃಷ್ಣಾ, ಮಧು ಹಾಗೂ ಚಂದ್ರನ್ ಅನ್ನೋ ಮೂವರು ಸಾನ್ನಪ್ಪಿದ್ದಾರೆ. ಇನ್ನು ಮಂಚಂಗ್, ವಾಸು, ಅರುಣಪ್ರಸತ್, ಕುಮಾರ, ರಂಜಾನ್, ಗುಣಬಾಲನ್, ಮುರುಗದಾಸ್, ಕಲೈಚಿತ್ರ, ತಿರುನಾವುಕ್ಕರಸು ಸೇರಿ 9 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ರು ತಿಳಿಸಿದ್ದಾರೆ.

ದುರಂತ ಘಟನೆಯಿಂದ ನಟ ಕಮಲ್ ಹಾಸನ್ ಶಾಕ್ ಗೆ ಒಳಗಾಗಿದ್ದಾರೆ. ಈ ಬಗ್ಗೆ ತೀವ್ರ ಸಂತಾಪ ಸೂಚಿರುವ ಅವರು ಮೃತ ಕುಟುಂಬಗಳಿಗೆ ಹಾಗೂ ಗಾಯಗೊಂಡಿರುವವರ ಕುಟುಂಬಗಳ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!