ದೇಶದಲ್ಲಿ ರೈತರ ಆತ್ಮಹತ್ಯೆಗಿಂತ ನಿರುದ್ಯೋಗದಿಂದ ಆತ್ಮಹತ್ಯೆ ಹೆಚ್ಚಳ!

254

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವ್ಯಾಪಕವಾಗಿ ಜನಸಂಖ್ಯೆ ಬೆಳೆಯುತ್ತಿರುವ ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚುತ್ತಲೇ ಇದೆ. ಈ ಬಗ್ಗೆ ಯಾವುದೇ ಸರ್ಕಾರಗಳು ಗಮನ ಕೊಡುತ್ತಿಲ್ಲ. ಕೋಟಿ ಕೋಟಿ ಉದ್ಯೋಗಿ ಸೃಷ್ಟಿ ಮಾಡುತ್ತೇವೆ ಎಂದ ಪ್ರಧಾನಿ ಮೋದಿ ಕೂಡ ವಿಫಲರಾಗಿದ್ದಾರೆ ಎನ್ನುತ್ತಿವೆ ಈ ಸಾವಿನ ವರದಿಗಳು.

2016ರಿಂದ 19ರ ಅವಧಿ ನಡುವೆ ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಶೇಕಡ 24ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಬಹಿರಂಗಪಡಿಸಿವೆ. 2019ನೇ ಸಾಲಿನಲ್ಲಿ ಕರ್ನಾಟಕದಲ್ಲಿ 553 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದು ಇಡೀ ದೇಶದಲ್ಲಿಯೇ ಅತಿ ಹೆಚ್ಚು. ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಇನ್ನು ಕರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್ 2ನೇ ಅಲೆಯಲ್ಲಿ 1 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಶೇಕಡ 97ರಷ್ಟು ಕುಟುಂಬದ ಆದಾಯ ಕಡಿಮೆಯಾಗಿದೆ ಅಂತಾ ಭಾರತ ಆರ್ಥಿಕತೆಯ ಕಣ್ಗಾವಲು ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣಗಳು ರೈತರ ಆತ್ಮಹತ್ಯೆಗಿಂತಲೂ ಅಧಿಕವಾಗಿದೆ ಅನ್ನೋದು ನ್ಯಾಷನಲ್ ಕ್ರೈ ರೆಕಾರ್ಡ್ ಬ್ಯೂರೋದಿಂದ ತಿಳಿದು ಬಂದಿದೆ.

2017ರ ಆತ್ಮಹತ್ಯೆ ಪ್ರಕರಣಕ್ಕೆ ಹೋಲಿಸಿದರೆ 2018ರಲ್ಲಿ ಶೇಕಡ 3.6ರಷ್ಟು ಹೆಚ್ಚಿದ್ದು, ದೇಶ್ಯಾದ್ಯಂತ ಬರೋಬ್ಬರಿ 1,34,516 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಗಂಟೆಗೆ 1 ಒಬ್ಬರಂತೆ ಆತ್ಮಹತ್ಯೆ ಪ್ರಕರಣ ನಡೆಯುತ್ತಿವೆ ಅಂತಿವೆ ವರದಿಗಳು. ಅದರಲ್ಲೂ ಪುರುಷರ ಪ್ರಮಾಣ ಹೆಚ್ಚಿದೆ. ಮಹಿಳೆಯರು, ಗೃಹಿಣಿಯರ ಆತ್ಮಹತ್ಯೆ ಪ್ರಕರಣಗಳು ಸಹ ಹೆಚ್ಚಿವೆ. ಇನ್ನು 2020-21ನೇ ಸಾಲಿನ ವರದಿ ಇನ್ನು ಹೆಚ್ಚಿನ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಸರ್ಕಾರವನ್ನ ನಂಬಿದ ಜನರು ಜೀವನ ಅಂತ್ಯವಾಗ್ತಿರುವುದು ಮಾತ್ರ ದುರಂತ.




Leave a Reply

Your email address will not be published. Required fields are marked *

error: Content is protected !!