ನಿರುದ್ಯೋಗ ಸತ್ಯ ಒಪ್ಪಿಕೊಂಡ ಮೋದಿ ಸರ್ಕಾರ

364

45 ವರ್ಷಗಳಲ್ಲಿಯೇ ಅತೀ ಹೆಚ್ಚು ಉದ್ಯೋಗ ಸಮಸ್ಯೆ ಎದುರಾಗಿದೆ ಅನ್ನೋ ಸತ್ಯವನ್ನ ಕೇಂದ್ರ ಸರ್ಕಾರ ಇದೀಗ ಒಪ್ಪಿಕೊಂಡಿದೆ. 2017 ಹಾಗೂ 18ರ ಸಾಲಿನ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 6.01ಕ್ಕೆ ಏರಿಕೆಯಾಗಿದೆ ಅನ್ನೋದು ಸಚಿವಾಲಯವೇ ತಿಳಿಸಿದೆ. ಇದನ್ನ ಇದೀಗ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ನೋಟ್ ಬ್ಯಾನ್ ಬಳಿಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಸಹ ಆಗಿತ್ತು.1972-73ರ ಬಳಿಕ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಅಂತಾ ಹೇಳಲಾಗಿತ್ತು. ಆದ್ರೆ, ಇದನ್ನ ಎನ್ ಡಿಎ ಸರ್ಕಾರ ಒಪ್ಪಿಕೊಂಡಿರ್ಲಿಲ್ಲ. ಕಾರ್ಮಿಕ ಸಚಿವಾಲಯದ ಪ್ರಕಾರ ನಗರದಲ್ಲಿ ಶೇ.7.8 ಗ್ರಾಮೀಣದಲ್ಲಿ ಶೇಕಡ 5.3 ರಷ್ಟು ನಿರುದ್ಯೋಗ ಸಮಸ್ಯೆ ಇದೆ.

ನಿರುದ್ಯೋಗ ಸಮಸ್ಯೆ ಪುರುಷರಲ್ಲಿ ಶೇಕಡ 6.2 ಹಾಗೂ ಮಹಿಳೆಯರಲ್ಲಿ 5.7 ಸಮಸ್ಯೆ ಇದೆ. 2011-12ರಲ್ಲಿ ಯುಪಿಎ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆ ಕೇವಲ 2.2ರಷ್ಟು ಇತ್ತು ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!