ಟಿ-20 ಸೇಡು ತೀರಿಸಿಕೊಂಡು ಕಿವೀಸ್

308

ಟೀಂ ಇಂಡಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 22 ರನ್ ಗಳ ಅಂತರದಿಂದ ಗೆಲ್ಲುವ ಮೂಲಕ ಕಿವೀಸ್ ಪಡೆ ಟಿ-20 ಸರಣಿ ಸೋಲಿನ ಸೇಡು ತೀರಿಸಿಕೊಂಡಿತು.

ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಮ್ ಲಥಿಮ್ ಟೀಂ ಇದನ್ನ ಚೆನ್ನಾಗಿಯೇ ಬಳಸಿಕೊಂಡಿತು. ಹೀಗಾಗಿ ನಿಗದಿತ 50 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 273 ರನ್ ಗಳನ್ನ ಕಲೆ ಹಾಕಿತು.

ರಾಸ್ ಟೇಲರ್

ಆರಂಭಿಕ ಆಟಗಾರರಾದ ಗುಪ್ಟಿಲ್ (79) ಹಾಗೂ ನಿಕೋಲಸ್ (41) ಉತ್ತಮ ಆರಂಭ ನೀಡಿದ್ರು. ಈ ಜೋಡಿ ಮೊದಲ ವಿಕೆಟ್ ಗೆ 93 ರನ್ ಗಳ ಕಾಣಿಕೆ ನೀಡಿತು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಟೇಲರ್ ಮತ್ತೆ ಬ್ಯಾಟ್ ಬೀಸಿ 73 ರನ್ ಗಳಿಸಿದ. ಟಾಮ್ ಬ್ಲೆಂಡೆಲ್ 22, ಬೌಲರ್ ಜೇಮ್ಸನ್ 25 ರನ್ ಬಾರಿಸಿದ. ಆದ್ರೆ, ಉಳಿದ ಆಟಗಾರರು ಒಂದಂಕಿಗೆ ಔಟ್ ಆಗಿ ಪೆವಿಲಿಯನ್ ಸೇರಿದ್ರು.

ಕ್ಯಾಪ್ಟನ್ ಲಥಿಮ್ 7, ನಿಶ್ಯಾಮ್ 3, ಮಾರ್ಕ್ ಚಾಂಪಮನ್ 1, ಗ್ರ್ಯಾಂಡ್ ಹೋಮ್ 5, ಸೌಥಿ 3 ರನ್ ಬಾರಿಸಿದ್ರು. ಟೀಂ ಇಂಡಿಯಾ ಪರ ಚಾಹಲ್ 3, ಠಾಕೂರ್ 2, ಜಡೇಜಾ 1 ವಿಕೆಟ್ ಪಡೆದ್ರು.

274 ರನ್ ಗಳನ್ನ ಬೆನ್ನು ಹತ್ತಿದ್ದ ಕೊಹ್ಲಿ ಪಡೆ ಶುರುವಿನಲ್ಲಿ ಯಡವಿತು. 21 ರನ್ ಗಳಿಸಿದ್ದಾಗ ಕನ್ನಡಿಗ ಮಯಾಂಕ ಅಗರ್ವಾಲ್ 3 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದ. 34 ರನ್ ಗಳಿಸುವಷ್ಟರಲ್ಲಿ ಇನ್ನೊಬ್ಬ ಓಪನರ್ ಪೃಥ್ವಿ ಶಾ 24 ರನ್ ಗಳಿಸಿ ಔಟ್ ಆದ.

ಶ್ರೇಯಸ ಅಯ್ಯರ

ಕ್ಯಾಪ್ಟನ್ ವಿರಾಟ ಕೊಹ್ಲಿ 15, ಕೆ.ಎಲ್ ರಾಹುಲ 5, ಕೇದಾರ್ ಜಾದವ 9 ರನ್ ಗಳಿಸಿ ಔಟ್ ಆಗುವ ಮೂಲಕ ನ್ಯೂಜಿಲೆಂಡ್ ಬೌಲರ್ ಗಳ ದಾಳಿಗೆ ಸಿಲುಕಿದ್ರು. ಶ್ರೇಯಸ ಅಯ್ಯರ್ ಅರ್ಧ ಶತಕ ಗಳಿಸಿ ಆಡ್ತಿರುವ ಒಂದಿಷ್ಟು ಸಮಾಧಾನವಿತ್ತು. ಆದ್ರೆ, ಮುಂದೆ 2 ರನ್ ಗಳಿಸುವಷ್ಟರಲ್ಲಿ ಅಯ್ಯರ್ 52 ರನ್ ಗಳಿಗೆ ಔಟ್ ಆದ.

ಜಡೇಜಾ

ಮುಂದೆ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದು ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ. ಬೌಲಿಂಗ್ ನಲ್ಲಿ ಒಂದು ವಿಕೆಟ್ ಪಡೆದಿದ್ದ ಜಡೇಜಾ ಅರ್ಧ ಶತಕ ಬಾರಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದ. 129 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಹೀನಾಯವಾಗಿ ಸೋಲು ಒಪ್ಪಿಕೊಳ್ಳುವ ಸ್ಥಿತಿಯಲ್ಲಿತ್ತು. ಆಗ ಆಸರೆಯಾದ ಜಡೇಜಾ ಅದ್ಭುತವಾಗಿ ಆಡಿದ. ಆದ್ರೆ ಆತನ ಏಕಾಂಗಿ ಹೋರಾಟ ಕೈ ಹಿಡಿಯಲಿಲ್ಲ. 55 ರನ್ ಗಳಿಗೆ ಔಟ್ ಆದ. ಚಾಹಲ್ ರನ್ ಔಟ್ ಆಗುವ ಮೂಲಕ 48.3 ಓವರ್ ಗಳಿಗೆ 251 ರನ್ ಗಳಿಗೆ ಸರ್ವಪತನ ಕಂಡಿತು.

ನ್ಯೂಜಿಲೆಂಡ್ ಪರ ಬ್ಯಾನೆಟ್, ಸೌಥಿ, ಜೇಮ್ಸನ್ ಹಾಗೂ ಗ್ರ್ಯಾಂಡ್ ಹೋಮ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು. ನಿಶಾಮ್ 1 ವಿಕೆಟ್ ಪಡೆದ. 3 ಏಕದಿನ ಪಂದ್ಯಗಳಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ 1 ಪಂದ್ಯ ಬಾಕಿ ಇರುವ ಮೊದ್ಲೇ ಸರಣಿಯನ್ನ ನ್ಯೂಜಿಲೆಂಡ್ ಕೈವಶ ಮಾಡಿಕೊಂಡಿತು.




Leave a Reply

Your email address will not be published. Required fields are marked *

error: Content is protected !!