ಮಿಥಾಲಿ ಪಡೆಗೆ ಮತ್ತೆ ಸೋಲು

534

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಈಡನ್ ಪಾರ್ಕ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಮಿಥಾಲ್ ರಾಜ್ ಪಡೆಗೆ ಮತ್ತೊಂದು ಸೋಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ.

ಟೌಸ್ ಗೆದ್ದ ಆಸೀಸ್ ನಾಯಕಿ ಮೆಗ್ ಲೆನ್ನಿಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಭಾರತ ಮೊದಲು ಬ್ಯಾಟ್ ಮಾಡಿತು. ನಾಯಕಿ ಮಿಥಾಲಿ 68, ಯಶತಿಕಾ 59, ಹರ್ಮನ್ ಪ್ರೀತ್ ಕೌರ್ ಔಟ್ ಆಗದೆ 57 ರನ್ ಗಳಿಸಿದ ಪರಿಣಾಮ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಆಸೀಸ್ ಪರ ಬ್ರೌನ್ 3, ಅಲನ್ ಕಿಂಗ್ 2, ಜೆಸ್ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಆಸೀಸ್, ನಾಯಕಿ ಮೆಗ್ 97, ಹೆಲ್ಲಿ 72, ರೇಚಲ್ 43 ರನ್ ಗಳ ಭರ್ಜರಿ ಆಟದಿಂದಾಗಿ 49.3 ಓವರ್ ಗಳಲ್ಲಿ 280 ರನ್ ಗಳಿಸಿ ಜಯ ಸಾಧಿಸಿದರು. ಭಾರತ ಪರ ಪೂಜಾ ವಸ್ತ್ರಕರ 2, ಸ್ನೇಹಾ ರಾಣಾ ಹಾಗೂ ಮೇಘಾ ಸಿಂಗ್ ತಲಾ 1 ವಿಕೆಟ್ ಪಡೆದರು. ಇನ್ನು 200ನೇ ಏಕದಿನ ಪಂದ್ಯವಾಡಿದ ಜೂಲನ್ ಗೋಸ್ವಾಮಿ ಒಂದೂ ವಿಕೆಟ್ ಪಡೆಯಲಿಲ್ಲ.




Leave a Reply

Your email address will not be published. Required fields are marked *

error: Content is protected !!