ಅಶ್ವಿನ್ ಆರ್ಭಟ.. ರೂಟ್ ಪಡೆಗೆ 482 ರನ್ ಟಾರ್ಗೆಟ್

245

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ ರವಿಚಂದ್ರನ್ ಅಶ್ವಿನ್ ಭರ್ಜರಿ 106 ರನ್ ಗಳ ಆಟವಾಡಿದ್ದಾರೆ. ಆದ್ರೆ, ರಹಾನೆ(10) ಮತ್ತೆ ಫೇಲ್ ಆಗಿದ್ದಾರೆ. ಚಾನ್ಸ್ ಪಡೆದ ಅಕ್ಷರ ಪಟೇಲ 7 ರನ್ ಗಳಿಸಿ ಫೇಲ್ ಆದ್ರು. ಕುಲದೀಪ ಯಾದವ 3, ಇಶಾಂತ ಶರ್ಮಾ 7 ರನ್ ಗಳಿಸಿದ್ರು. ಮಹಮ್ಮದ ಸಿರಾಜ್ 16 ರನ್ ಗಳಿಸಿ ನಾಟೌಟ್ ಆಗಿ ಉಳಿದ.

ಭಾರತ ಅಂತಿಮವಾಗಿ 2ನೇ ಇನ್ನಿಂಗ್ಸ್ ಲ್ಲಿ 286 ರನ್ ಗಳಿಗೆ ಆಲೌಟ್ ಆಗುವ ಮೂಲಕ 3ನೇ ದಿನಕ್ಕೆ ತನ್ನ ಆಟ ಮುಗಿಸಿತು. ಇದರೊಂದಿಗೆ 482 ರನ್ ಗಳ ಟಾರ್ಗೆಟ್ ನೀಡಿದೆ. ಇಂಗ್ಲೆಂಡ್ ಪರ ಲೀಚ್ ಹಾಗೂ ಮೊಯಿನ್ ಅಲಿ ತಲಾ 4 ವಿಕೆಟ್ ಪಡೆದು ಮಿಂಚಿದ್ರು. ಸ್ಟೋನ್ 1 ವಿಕೆಟ್ ಪಡೆದ.

ಇನ್ನು 482 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿರುವ ಜೋ ರೂಟ್ ಪಡೆ ಆರಂಭಿಕ ಆಘಾತ ಎದುರಿಸಿದೆ. ಹೀಗಾಗಿ 53 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಬರ್ನ್ಸ್ 25, ಸಿಬ್ಲಿ 3, ಲೀಚ್ 0 ರನ್ ಗೆ ಔಟ್ ಆದ್ರು.  ಅಕ್ಷರ ಪಟೇಲ್ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!