ಆ ಮನಿ ಪಿ.. ಈ ಮನಿ ಪಿ ಎನ್ನುತ್ತಿರುವ ಲೀಡರ್ಸ್..!

345

ಪ್ರಜಾಸ್ತ್ರ ವಿಶೇಷ ವರದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರ ಇದೀಗ ಉಪ ಚುನಾವಣೆಗೆ ಸಜ್ಜಾಗ್ತಿದೆ. ಜೆಡಿಎಸ್ ಶಾಸಕರಾಗಿದ್ದ ಎಂ.ಸಿ ಮನಗೂಳಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಹೊಸ ಮುಖಗಳು ಸ್ಪರ್ಧೆಗಿಳಿಯಲು ಕಸರತ್ತು ನಡೆಸಿವೆ.

ಸಿಂದಗಿ ರಾಜಕೀಯ ಇತಿಹಾಸದಲ್ಲಿ ಬಹುಶಃ ಮೊದಲ ಬಾರಿಗೆ ಉಪ ಚುನಾವಣೆ ನಡೆಯುತ್ತಿದೆ.! ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು 2 ವರ್ಷವಿದ್ದು, ಅದನ್ನ ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ನಾಯಕರು ಕಣಕ್ಕೆ ಇಳಿಯಲು ತೆರೆಮರೆ ಪೈಪೋಟಿ ನಡೆಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ನತ್ತ ಮುಖ ಮಾಡುವ ಸಾಧ್ಯತೆಯಿದೆ ಎಂದು ಜನರು ಮಾತ್ನಾಡಿಕೊಳ್ತಿದ್ದಾರೆ. ಜೆಡಿಎಸ್ ಗೆ ಅನುಕಂಪವಿದ್ದರೂ ಸಹ ಅವರಲ್ಲಿಯೂ ಸಹ ಕೈ ಹಿಡಿಬೇಕು ಅನ್ನೋ ಲೆಕ್ಕಾಚಾರವಿದೆ ಎನ್ನಲಾಗ್ತಿದೆ. ಹೀಗಾಗಿ ಯಾರೆಲ್ಲ ಆ ಮನಿ ಪಿ, ಈ ಮನಿ ಪಿ ಎನ್ನುತ್ತಾರೆ ಅನ್ನೋ ಕುತೂಹಲ ಕ್ಷೇತ್ರದ ಜನರಲ್ಲಿ ಮೂಡಿದೆ.

ಒಬ್ಬ ನಾಯಕರು ತವರು ಮನೆ ಸೇರುವ ಲಕ್ಷಣಗಳಿವೆಯಂತೆ. ಇನ್ನೊಬ್ಬ ನಾಯಕರು ತನೆ ಮಹಿಳೆಗೆ ‘ಕೈ’ ಕೊಡಲಿದ್ದಾರೆ ಅಂತಾನೂ ಬಿಸಿಬಿಸಿ ಚರ್ಚೆ ನಡೆದಿದೆ. ಹೀಗಾಗಿ ಮೂಲ ನಾಯಕರ ಎದೆಯಲ್ಲಿ ಒಂದಿಷ್ಟು ಢವಢವ ಶುರುವಾಗಿದೆಯಂತೆ. ಅಖಾಡಕ್ಕೆ ಮುಹೂರ್ತ ಫಿಕ್ಸ್ ಆದ್ಮೇಲೆ ಇನ್ನಷ್ಟು ರಂಗೇರಲಿದ್ದು ಆಗ ಯಾವ ಪಕ್ಷದಿಂದ ಯಾರು ಎಂಟ್ರಿ ಕೊಡ್ತಾರೆ ಅನ್ನೋದಕ್ಕೆ ಒಂದು ಹಂತದ ಚಿತ್ರಣ ಸಿಗಬಹುದು.




Leave a Reply

Your email address will not be published. Required fields are marked *

error: Content is protected !!