ಹುಬ್ಬೇರಿಸುತ್ತೆ ಜಡೇಜಾ ಅದ್ಭುತ ಕ್ಯಾಚ್.. 235 ರನ್ ಗಳಿಗೆ ಕಿವೀಸ್ ಆಲೌಟ್

363

ಕ್ರೈಸ್ಟ್ ಚರ್ಚ್: ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇವಾದ ಇಂದು ಬೆಳಗ್ಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಹಿಡಿದ ಕ್ಯಾಚ್ ಭರ್ಜರಿ ಸೌಂಡ್ ಮಾಡ್ತಿದೆ. ಮೊಹ್ಮದ್ ಶೆಮಿ ಬೌಲಿಂಗ್ ನಲ್ಲಿ ಜಡೇಜಾ ಹಿಡಿದ ಕ್ಯಾಚ್ ವರ್ಷದ ಮೊದಲ ಅದ್ಭುತ ಕ್ಯಾಚ್ ಆಗಿದೆ.

ಶೆಮಿ ಬೌಲಿಂಗ್ ನಲ್ಲಿ ನೈಲ್ ವ್ಯಾಗ್ನರ್ ಬಾರಿಸಿದ ಚೆಂಡನ್ನ ಸ್ಕ್ವೇರ್ ಲೆಗ್ ಸೈಡ್ ನಲ್ಲಿ ನಿಂತಿದ್ದ ಜಡೇಜಾ ಕಡೆ ಬಂದ ಬೌಲ್ ನ್ನ ಹಿಮ್ಮುಖವಾಗಿ ಓಡಿ ಹಾರಿ ಎಡಗೈಯಲ್ಲಿ ಹಿಡಿದ ಕ್ಯಾಚ್ ನೋಡುಗರ ಮೈಜುಂ ಎನಿಸುತ್ತೆ. 9 ವಿಕೆಟ್ ಗೆ ಭರ್ಜರಿ ಜೊತೆಯಾಟವಾಡ್ತಿದ್ದ ವ್ಯಾಗ್ನರ್ ಹಾಗೂ ಕೈಲಿ ಜೇಮಿಸನ್ ಆಟಕ್ಕೆ ಬ್ರೇಕ್ ಬಿದ್ದಿತು.

ನಿನ್ನೆ ಮೊದಲ ಇನ್ನಿಂಗ್ಸ್ ಶುರು ಮಾಡಿದ ಭಾರತ, ಕಿವೀಸ್ ಪಡೆಯ ಮಾರಕ ಬೌಲಿಂಗ್ ದಾಳಿಗೆ ನಲುಗಿ 242 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಕಿವೀಸ್ 23 ಓವರ್ ಗಳಲ್ಲಿ 63 ರನ್ ಗಳಿಸಿ ಆಡ್ತಿತ್ತು. ಇಂದು ಆಟ ಮುಂದುವರೆಸಿದ ಕೇನ್ ವಿಲಿಯಮ್ಸನ್ ಟೀಂ, ಶೆಮಿ ಹಾಗೂ ಬೂಮ್ರಾ ದಾಳಿಗೆ ಪೆವಿಲಿಯನ್ ಹಾದಿ ಹಿಡಿದ್ರು. ಹೀಗಾಗಿ 73.1 ಓವರ್ ಗಳಲ್ಲಿ 235 ರನ್ ಗಳಿಗೆ ಆಲೌಟ್ ಆಗಿದೆ. ಶೆಮಿ 4 ಹಾಗೂ ಬೂಮ್ರಾ 3 ವಿಕೆಟ್ ಪಡೆದು ಮಿಂಚಿದ್ರು.

7 ರನ್ ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆಡ್ತಿರುವ ಭಾರತ 26 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 68 ರನ್ ಗಳಿಸಿ ಆಡ್ತಿದೆ. ಚೆತೇಶ್ವರ ಪೂಜಾರಿ 17, ಅಜಿಂಕೆ ರಹಾನೆ 7 ರನ್ ಗಳಿಸಿ ಆಡ್ತಿದ್ದಾರೆ. ಕ್ಯಾಪ್ಟನ್ ವಿರಾಟ ಕೊಹ್ಲಿ 14 ರನ್ ಬಾರಿಸಿ ಮತ್ತೆ ಫೇಲ್ ಆದ.




Leave a Reply

Your email address will not be published. Required fields are marked *

error: Content is protected !!