ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್

254

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್ 75 ರನ್ ಹಾಗೂ ರವೀಂದ್ರ ಜಡೇಜಾ 50 ರನ್ ಗಳೊಂದಿಗೆ ಇಂದು ಆಟ ಮುಂದುವರೆಸಿದರು. ಶ್ರೇಯಸ್ ಶತಕ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸಂಚ್ಯುರಿ ದಾಖಲಿಸಿದ. ಇದರೊಂದಿಗೆ ಆಡಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ 10ನೇ ಆಟಗಾರನಾದ. 105 ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್ ನಲ್ಲಿ ಔಟ್ ಆದ.

ಜಡೇಜಾ ಆರಂಭದಲ್ಲಿ ವಿಕೆಟ್ ಒಪ್ಪಿಸಿ 50 ರನ್ ಗೆ ಉಳಿದ. ನಿನ್ನೆ 1 ವಿಕೆಟ್ ಪಡೆದಿದ್ದ ಅನುಭವಿ ಟಿಮ್ ಸೌಥಿ ಇಂದು ಬೆಳ್ಳಂಬೆಳಗ್ಗೆ ಭರ್ಜರಿ ದಾಳಿ ನಡೆಸಿ 3 ವಿಕೆಟ್ ಪಡೆದರು. ಭಾರತ ಸಧ್ಯ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದೆ. ಅಶ್ವಿನ್, ಅಕ್ಸರ್ ಪಟೇಲ್ ಕಣದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!