ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಗಾರ್ಡನ್

272

ಪ್ರಜಾಸ್ತ್ರ ಸುದ್ದಿ

ಉದ್ಯಾನವನಕ್ಕೆ ಹೋಗುವುದು ಅಂದರೆ ಎಲ್ಲರಿಗೂ ಇಷ್ಟ. ಅಲ್ಲಿನ ವಿವಿಧ ಗಿಡಗಳು, ಹೂವುಗಳನ್ನು ನೋಡಿ ಆನಂದಿಸುವುದು, ಮುಟ್ಟುವುದು, ವಾಸನೆ ಪಡೆದುಕೊಳ್ಳುವುದು ಸಹಜ. ಆದರೆ, ಇಂಗ್ಲೆಂಡ್ ನಲ್ಲೊಂದು ಗಾರ್ಡನ್ ಇದೆ. ಅಲ್ಲಿಗೆ ಹೋಗುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕು.

ಅಲ್ನವಿಕ್ ಗಾರ್ಡನ್, ಉತ್ತರ ಇಂಗ್ಲೆಂಡ್ ನಲ್ಲಿರುವ ಅತ್ಯಂತ ಆಕರ್ಷಣಿಯವಾಗಿದೆ. ಇಲ್ಲಿನ ಸುಂದರ ಸಸ್ಯ ಸಂಪತ್ತು, ವಿವಿಧ ಹೂವುಗಳು, ಕಾರಂಜಿ ನೋಡುಗರನ್ನು ಸೆಳೆಯುತ್ತವೆ. ಆದರೆ, ಇಲ್ಲಿನ ಹೂವುಗಳನ್ನು ಮುಟ್ಟಬಾರದು, ವಾಸನೆ ನೋಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಜೀವ ಹೋಗುವುದು ನಿಶ್ಚಿತ. ಯಾಕಂದರೆ, ಇದುವರೆಗೂ ಇಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

14 ಎಕರೆ ವಿಸ್ತೀರ್ಣ ಹೊಂದಿರುವ ಈ ಗಾರ್ಡನ್, ಸ್ಕಾಟ್ ಲೆಂಡ್ ನೊಂದಿಗೆ ಗಡಿ ಹಂಚಿಕೊಂಡಿದೆ. ಇಲ್ಲಿಗೆ ಪ್ರತಿ ವರ್ಷ 6 ಲಕ್ಷ ಜನರು ಭೇಟಿ ನೀಡುತ್ತಾರೆ. ಹೀಗಿ ಭೇಟಿ ನೀಡುವ ಜನರು ತಮ್ಮ ಜೀವದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಯಾಮಾರಿದರೂ ಜೀವ ಕಳೆದುಕೊಳ್ಳುತ್ತಾರೆ. ಯಾಕಂದರೆ, ಇಲ್ಲಿ ವಿಷಯುಕ್ತ ಹೂವುಗಳು, ಸಸಿಗಳಿವೆ. ಅವುಗಳನ್ನು ಮುಟ್ಟುವುದಾಗಲಿ, ವಾಸನೆ ತೆಗೆದುಕೊಳ್ಳುವುದಾಗಲಿ ಮಾಡಿದರೆ ಪ್ರಾಣ ಹೋದಂತೆ. ಹೀಗಾಗಿ ವಿಷದ ಉದ್ಯಾನವನ ಎಂದು ಬೋರ್ಡ್ ಹಾಕಿದ್ದು ಅಲ್ಲಿಗೆ ಹೋಗುವಂತಿಲ್ಲ.

ಈ ವಿಷದ ಗಾರ್ಡನ್ ಹಿಂದೆ ಹಲವು ಕಥೆಗಳಿವೆ. 15ನೇ ಶತಮಾನದ ಹಿನ್ನೆಲೆಯಿದೆ. ಅದನ್ನು ತಿಳಿದುಕೊಳ್ಳುತ್ತಾ ಹೋದಷ್ಟು ಕುತೂಹಲ ಹೆಚ್ಚಾಗುತ್ತೆ. ಹೀಗಾಗಿ ಕೆಲವೊಮ್ಮ ಕೆಲವೊಂದಿಷ್ಟು ವಿಷಯಗಳನ್ನು ಅಷ್ಟಕ್ಕೆ ಬಿಡುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!