ಕನ್ನಡಿಗನ ಭರ್ಜರಿ ಶತಕದಾಟ

340

ಪುಣೆ: ಮಹಾರಾಷ್ಟ್ರ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಸೌಥ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ, ಕನ್ನಡಿಗ ಮಯಾಂಕ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ್ದಾರೆ.

189 ಬೌಲ್ ಗಳಲ್ಲಿ 106 ರನ್ ಗಳಿಸಿ ಆಟ ಮುಂದುವರೆಸಿದ್ದಾರೆ. ಮೊದಲ ಪಂದ್ಯದಲ್ಲಿ ಡೆಬಲ್ ಸೆಂಚುರಿ ಬಾರಿಸಿದ ಮಯಾಂಕ ಮಿಂಚಿದ್ರು.

ಇನ್ನು ಅರ್ಧ ಶತಕ ಪೂರೈಯಿಸಿ ಆಡ್ತಿದ್ದ ಚೆತೇಶ್ವರ ಪೂಜಾರ 58 ರನ್ ಗಳಿಗೆ ರಬ್ಡಾ ಬೌಲಿಂಗ್ ನಲ್ಲಿ ಡುಪ್ಲಸಿಗೆ ಕ್ಯಾಚ್ ಕೊಟ್ಟು ಹೊರ ನಡೆದ್ರು. ನಾಲ್ಕನೇ ವಿಕೆಟ್ ಗೆ ನಾಯಕ ವಿರಾಟ ಕೊಹ್ಲಿ ಬಂದಿದ್ದು, 8 ರನ್ ಹೊಡೆದು ಕ್ರಿಸ್ ನಲ್ಲಿದ್ದಾರೆ. ಮೊದಲ ದಿನದ ಮೂರನೇ ವಿರಾಮಕ್ಕೆ 60.1 ಓವರ್ ಗಳಲ್ಲಿ 196ಕ್ಕೆ 2 ವಿಕೆಟ್ ಬಿದ್ದಿವೆ. ಕಗ್ಸೋ ರಬ್ಡಾ ಎರಡು ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!