ವೆಸ್ಟ್ ಇಂಡೀಸ್ ಗೆ 288 ಟಾರ್ಗೆಟ್

345

ಚೆನ್ನೈ: ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 288 ರನ್ ಗಳಿಸುವ ಮೂಲಕ ಹೋರಾಟಾತ್ಮಕ ಸ್ಕೋರ್ ನೀಡಿದೆ. ಶ್ರೇಯಸ ಅಯ್ಯರ 70, ರಿಶಿಬ್ ಪಂಥ 71 ಹಾಗೂ ಕೇದಾರ ಜಾದವ 40 ರನ್ ಬಾರಿಸುವ ಮೂಲಕ ಉತ್ತಮ ರನ್ ಕಲೆ ಹಾಕುವಲ್ಲಿ ಸಕ್ಸಸ್ ಆಗಿದೆ.

ಆರಂಭಿಕ ಆಟಗಾರರಾದ ರೋಹಿತ ಶರ್ಮಾ 36 ರನ್ ಗಳಿಸಿದ್ರೆ, ಕನ್ನಡಿಗ ಕೆ.ಎಲ್ ರಾಹುಲ ಕೇವಲ 6 ರನ್ ಗಳಿಗೆ ಔಟ್ ಆದ್ರು. ಇನ್ನು ನಾಯಕ ವಿರಾಟ ಕೊಹ್ಲಿ ಸಹ 4 ರನ್ ಗೆ ಔಟ್ ಆಗಿ ಫ್ಯಾನ್ಸ್ ಗೆ ನಿರಾಸೆ ಮೂಡಿಸಿದ್ರು. ಆಲ್ ರೌಂಡರ್ ರವಿಂದ್ರ ಜಡೇಜಾ 21 ರನ್ ಗಳಿಸಿದ್ರು. ಒಟ್ಟು 8 ವಿಕೆಟ್ ನಷ್ಟಕ್ಕೆ 287 ರನ್ ಕಲೆ ಹಾಕಿತು.

ವೆಸ್ಟ್ ಇಂಡೀಸ್ ಪರ ಕಾಟ್ರೋಲ್ 2, ಪೌಲ್ 2 ಹಾಗೂ ಜೋಶಪ್ 2 ವಿಕೆಟ್ ಪಡೆದ್ರೆ ನಾಯಕ ಪೊಲಾರ್ಡ್ 1 ವಿಕೆಟ್ ಪಡೆದ್ರು. ಇದೀಗ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಶುರು ಮಾಡಿದ್ದು 2 ಓವರ್ ಗೆ 8 ರನ್ ಗಳಿಸಿದೆ.




Leave a Reply

Your email address will not be published. Required fields are marked *

error: Content is protected !!