2-1 ರಿಂದ ಸರಣಿ ಗೆದ್ದ ಭಾರತ

442

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಕೊಹ್ಲಿ ಪಡೆ 67 ರನ್ ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಟಿ-20 ಪಂದ್ಯಗಳ ಸರಣಿಯನ್ನ 2-1ರಿಂದ ಟೀಂ ಇಂಡಿಯಾ ವಶ ಪಡಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೊಹ್ಲಿ ಬಾಯ್ಸ್ ಕೆರಿಬಿಯನ್ಸ್ ಬೌಲರ್ ಗಳನ್ನ ಬೆಂಡೆತ್ತಿದ್ರು. ಕನ್ನಡಿಗ ಕೆ.ಎಲ್ ರಾಹುಲ್ 56 ಎಸೆತಗಳಲ್ಲಿ ಭರ್ಜರಿ 91 ರನ್ ದಾಖಲಿಸಿದ್ರು. ಇನ್ನು ರೋಹಿತ್ ಶರ್ಮಾ 34 ಬೌಲ್ ಗಳಲ್ಲಿ 71 ರನ್ ಹಾಗೂ ಕ್ಯಾಪ್ಟನ್ ವಿರಾಟ ಕೊಹ್ಲಿ 29 ಬೌಲ್ ಗಳಲ್ಲಿ 70 ರನ್ ಚಚ್ಚಿದ್ರು. ಇದ್ರಿಂದಾಗಿ ಟೀಂ ಇಂಡಿಯಾ ವಿಕೆಟ್ ನಷ್ಟಕ್ಕೆ ಬರೋಬ್ಬರಿ 240 ರನ್ ಕಲೆ ಹಾಕಿತ್ತು. ಕೊಟ್ರಲ್, ವಿಲಿಯಮ್ಸ್ ಹಾಗೂ ಪೋಲಾರ್ಡ್ ತಲಾ 1 ವಿಕೆಟ್ ಪಡೆದ್ರು.

ಬೃಹತ್ ಸ್ಕೋರ್ ಬೆನ್ನು ಹತ್ತಿದ ಕಿರಾನ್ ಪೋಲಾರ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ಟೀಂ ಪರ ಪೋಲಾರ್ಡ್ 68, ಹಿಟ್ ಮೈರ್ 41 ಹಾಗೂ ವಿಲಿಯಮ್ಸ್ 13 ರನ್ ಗಳಿಸಿದ್ರು. ಉಳಿದ ಆಟಗಾರರು ಕ್ರಿಸ್ ನಲ್ಲಿ ನಿಲ್ಲಲು ಬಿಡದಂತೆ ಭಾರತದ ಬೌಲರ್ ಗಳು ಅಟ್ಯಾಕ್ ಮಾಡಿದ್ರು. ಹೀಗಾಗಿ 173ಕ್ಕೆ 8 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಭಾರತ ಪರ ಚಹಾರ್, ಭುವನೇಶ್ವರಕುಮಾರ, ಶೆಮಿ ಹಾಗೂ ಕುಲದೀಪ ಯಾದವ ತಲಾ 2 ವಿಕೆಟ್ ಪಡೆದ್ರು.

ಟೀಂ ಇಂಡಿಯಾ ನಾಯಕ ವಿರಾಟ ಕೊಹ್ಲಿ ಸರಣಿ ಶ್ರೇಷ್ಠ ಹಾಗೂ ಕೆ.ಎಲ್ ರಾಹುಲ ಪಂದ್ಯ ಶ್ರೇಷ್ಠ ಪಡೆದುಕೊಂಡ್ರು.




Leave a Reply

Your email address will not be published. Required fields are marked *

error: Content is protected !!