ಕೆರಿಬಿಯನ್ ಟೀಂ ಜೊತೆ ನಾಳೆ ಮೊದಲ ಟಿ-20 ಕದನ

334

ಭಾರತಕ್ಕೆ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ಜೊತೆ ಭಾರತ ಮೊದಲ ಟಿ-20 ಪಂದ್ಯವನ್ನ ನಾಳೆ ಆಡ್ತಿದೆ. ಹೈದ್ರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಟಿ-20 ಫೈಟ್ ನಡೆಯಲಿದೆ.

ಮನೀಶ ಪಾಂಡೆ, ರೋಹಿತ ಶರ್ಮಾ, ವಿರಾಟ ಕೊಹ್ಲಿ(ಕ್ಯಾಪ್ಟನ್), ಶ್ರೇಯಸ ಅಯ್ಯರ, ಕೆ.ಎಲ್ ರಾಹುಲ, ರಿಶಬ್ ಪಂಥ(ವಿಕೆಟ್ ಕಿಪರ್), ರವೀಂದ್ರ ಜಡೇಜಾ, ಶಿವಂ ದುಬೆ, ವಾಸಿಂಗ್ ಟನ್ ಸುಂದರ, ಸಂಜು ಸ್ಯಾಮ್ಸನ್, ಭುವನೇಶ್ವರ ಕುಮಾರ, ದೀಪಕ ಚಹಾರ್, ಕುಲದೀಪ ಯಾದವ, ಮೊಹಮ್ಮದ ಶೆಮಿ ಹಾಗೂ ಯುಜುವೇಂದ್ರ ಚಹಾಲ್ ಸೇರಿ 15 ಜನರ ಟೀಂ ರೆಡಿಯಾಗಿದೆ.

ನಾಳೆ ಕನ್ನಡಿಗ ಕೆ.ಎಲ್ ರಾಹುಲಗೆ ಆರಂಭಿಕನಾಗಿ ಚಾನ್ಸ್ ಸಿಕ್ಕಿದ್ರೆ ಟಿ-20 ಮ್ಯಾಚ್ ನಲ್ಲಿ ದಾಖಲೆ ಮಾಡಬಹುದು. ಕೇವಲ 26 ರನ್ ಗಳಿಸಿದ್ರೆ ಕೆ.ಎಲ್ ರಾಹುಲ ಟಿ-20ನಲ್ಲಿ ಸಾವಿರ ರನ್ ಗಳ ಗಡಿ ದಾಟಬಹುದು.

ಬಾರ್ಡನ್ ಕಿಂಗ್, ಕವಿನ್ ಲಿವಿಸ್, ಲೆಂಡಿ ಸಿಮೊನ್ಸ್, ಸಿಮರ್ನ್ ಹಿಟ್ ಮೈಯರ್, ಫೆಬಿನ್ ಅಲೆನ್, ಶರ್ಪನ್ ರೆಥರ್ ಫೋರ್ಡ್, ಜೋಶನ್ ಹೊಲ್ಡರ್, ಕೆಂಪೊ ಪೌಲ್, ಕ್ಯಾರಿ ಪೆರ್ರಿ, ಕಿರೋನ್ ಪೊಲಾರ್ಡ್(ಕ್ಯಾಪ್ಟನ್), ದೀನೇಶ ರಾಮದಿನ್(ವಿಕೆಟ್ ಕೀಪರ್), ನಿಕೊಲಸ್ ಪೊರನ್, ವಾಶ್ ಜೆಆರ್, ಕೆಸರಿಕ್ ವಿಲಿಯಮ್ ಹಾಗೂ ಶೆಲ್ಡನ್ ಕೆಟ್ರಲ್ ವೆಸ್ಟ್ ಇಂಡೀಸ್ ಟೀಂನಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!