ಸ್ಮಾಲ್ ಸ್ಕ್ರೀನ್ ಎಂಟ್ರಿ ಬಗ್ಗೆ ಡಿ ಬಾಸ್ ಹೇಳಿದ್ದೇನು?

365

ಸ್ಯಾಂಡಲ್ ವುಡ್ ಅಂಗಳದ ಡಿ ಬಾಸ್ ಸಾಕಷ್ಟು ಸಿನ್ಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರ ಬಹುನಿರೀಕ್ಷಿತ ಒಡೆಯ ಸಿನ್ಮಾ ಡಿಸೆಂಬರ್ 12ಕ್ಕೆ ರಿಲೀಸ್ ಆಗ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಇದೆಲ್ಲದರ ನಡುವೆ ಭರ್ಜರಿ ಸೌಂಡ್ ಮಾಡ್ತಿರುವುದು ನಟ ದರ್ಶನ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಯಾಗ್ತಾರೆ ಅನ್ನೋದು.

ದಚ್ಚು ಬಿಗ್ ಸ್ಕ್ರೀನ್ ಜೊತೆ ಸ್ಮಾಲ್ ಸ್ಕ್ರೀನ್ ನಲ್ಲಿಯೂ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿಯಿಂದ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಗೊಂದಲ ಮೂಡಿದೆ. ಅದಕ್ಕೆ ನಟ ದರ್ಶನ ಪುಲ್ ಸ್ಟಾಫ್ ಇಟ್ಟಿದ್ದಾರೆ. ನನಗೆ ಎರಡು ಕಡೆ ನಟನೆ ಮಾಡಲು ಬರುವುದಿಲ್ಲ. ನಾನೀಗ ಬೆಳ್ಳಿ ತೆರೆಯ ಮೇಲೆ ನಟನೆ ಮಾಡ್ತಿರುವುದನ್ನ ಎಂಜಾಯ್ ಮಾಡ್ತಿದೀನಿ. ಟಿವಿ ದುನಿಯಾಗೆ ಬರುವ ಬಗ್ಗೆ ಯೋಚನೆ ಮಾಡಿಲ್ಲ ಅಂತಾ ಹೇಳಿದ್ದಾರೆ. ಈ ಮೂಲಕ ಎಲ್ಲ ಊಹಾಪೂಹಗಳಿಗೆ ತೆರೆ ಎಳೆದಿದ್ದಾರೆ.

ಇನ್ನು ಸಾಕಷ್ಟು ಕ್ರೇಜ್ ಹುಟ್ಟು ಹಾಕಿರುವ ರಾಬರ್ಟ್ ಶೂಟಿಂಗ್ ನಡೆಯುತ್ತಿದೆ. ತರುಣ ಸುಧೀರ ಆಕ್ಷನ್ ಕಟ್ ಹೇಳ್ತಿದ್ದಾರೆ. ಗಂಡುಗಲಿ ಮದಕರಿ ನಾಯಕ ಸಟ್ಟೇರಿದೆ. ನಾಳೆ ಬೆಂಗಳೂರಿನಲ್ಲಿ ಅಧಿಕೃತವಾಗ ಲಾಂಚ್ ಆಗ್ತಿದೆ. ಇದು ಅವರ ಫ್ಯಾನ್ಸ್ ಗೆ ಖುಷಿ ನೀಡಲಿದೆ.


TAG


Leave a Reply

Your email address will not be published. Required fields are marked *

error: Content is protected !!