ನಿರ್ದೇಶಕನ ವಿರುದ್ಧ ರೇಪ್ ಆರೋಪ

915
ಬೆಂಗಳೂರು : ನಟ ಹಾಗೂ ನಿರ್ದೇಶಕನೊಬ್ಬ ಯುವತಿಯೊಬ್ಬಳನ್ನ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ದೇ ಆತನ ವಿಕೃತ ಕಾರ್ಯಕ್ಕೆ ಅವನ ತಾಯಿ ಸಹ ಸಪೋರ್ಟ್ ನೀಡಿದ್ದಳು ಅಂತಾ ಹೇಳಲಾಗ್ತಿದೆ. ಕಿರುಚಿತ್ರ ನಿರ್ದೇಶಕ ಪ್ರಮೋದ್ ಕುಮಾರ್ ಈ ಹೀನ ಕೃತ್ಯ ಎಸಗಿದ್ದಾನೆ ಅಂತಾ ಹೇಳಲಾಗ್ತಿದೆ.
21 ವರ್ಷದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಹುಟ್ಟು ಹಬ್ಬದ ಪಾರ್ಟಿ ನೆಪ ಮಾಡಿಕೊಂಡು ಆಕೆಯನ್ನು ಮನೆಗೆ ಕರೆದುಕೊಂಡು ಹೋದ ಪ್ರಮೋದ್ ಈ ಕೃತ್ಯ ಎಸಗಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ.
ಈ ಪ್ರಕರಣ ಸಂಬಂಧ ಇದೀಗ ಪ್ರಮೋದ್ ಕುಮಾರ್ ನನ್ನು ವಿವೇಕ ನಗರ ಪೋಲಿಸ್ ರು ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ಪ್ರಮೋದ್ ಕುಮಾರ್ ತಾಯಿ ಎರಡನೇ ಆರೋಪಿ ಆಗಿದ್ದಾಳೆ. ಮಗನ ನೀಚ ಕೆಲಸಕ್ಕೆ ತಾಯಿ ಸಾಥ್ ನೀಡಿದ್ದು ಮಾತ್ರ ದುರಂತ.



Leave a Reply

Your email address will not be published. Required fields are marked *

error: Content is protected !!