66ನೇ ರಾಷ್ಟ್ರೀಯ ಸಿನ್ಮಾ ಪ್ರಶಸ್ತಿ ಪಟ್ಟಿ ಪ್ರಕಟ.. ಕನ್ನಡದ ಯಾವ ಸಿನ್ಮಾಗೆ ಯಾವ ಪ್ರಶಸ್ತಿ?

418

ನವದೆಹಲಿ: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಇದರಲ್ಲಿ ಬಾಲಿವುಡ್ ನ ಇಬ್ಬರಿಗೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ತೆಲುಗು ನಟಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

ಉರಿ ಸಿನಿಮಾದ ನಟ ವಿಕ್ಕಿ ಕೌಶಲ ಹಾಗೂ ಅಂಧಾಧುನ್ ಚಿತ್ರದ ನಟ ಆಯುಷ್ಮಾನ್ ಖುರಾನ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೆಲುಗಿನ ಮಹಾನಟಿ ಸಿನಿಮಾದ ನಟಿ ಕೀರ್ತಿ ಸುರೇಶ ಬೆಸ್ಟ್ ಆ್ಯಕ್ಟರ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕನ್ನಡದ ಕೆಜಿಎಫ್, ಸರಕಾರಿ ಹಿ.ಪ್ರಾ ಶಾಲೆ ಕಾಸರಗೂಡು, ನಾತಿಚರಾಮಿ ಸಿನಿಮಾಗಳಿಗೂ ಪ್ರಶಸ್ತಿಗಳು ಬಂದಿದೆ. ಈ ಮೂಲಕ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡದ ಸಿನಿಮಾಗಳು ಸೌಂಡ್ ಮಾಡಿವೆ.

ಪ್ರಶಸ್ತಿ ಪಟ್ಟಿ ಹೀಗಿದೆ :

ವಿಕ್ಕಿ ವಿಶಾಲ ಹಾಗೂ ಆಯುಷ್ಮಾನ್ ಖುರಾನ ಬೆಸ್ಟ್ ಆ್ಯಕ್ಟರ್

ಕೀರ್ತಿ ಸುರೇಶ ಬೆಸ್ಟ್ ಆ್ಯಕ್ಟರ್ಸ್

ಅತ್ಯುತ್ತಮ ಪೋಷಕ ನಟ: ಸ್ವನಂದ ಕಿರ್ಕಿರೆ (ಚುಂಬಕ್)

ಅತ್ಯುತ್ತಮ ಪೋಷಕ ನಟಿ: ಸುರೇಖಾ ಸಿಕ್ರಿ (ಬಧಾಯಿ ಹೋ)

ಅತ್ಯುತ್ತಮ ಸಿನಿಮಾ : ಹೆಲ್ಲಾರೊ (ಗುಜರಾತಿ)

ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ : ಪ್ಯಾಡ್ ಮ್ಯಾನ್ (ಹಿಂದಿ)

ಅತ್ಯುತ್ತಮ ಶಿಕ್ಷಣ ಚಿತ್ರ : ಸರ್ಲಾಭ ವಿರಾಲ

ಅತ್ಯುತ್ತಮ ಸಾಮಾಜಿಕ ಚಿತ್ರ : ತಲಾಟೆ ಕುಂಜಿ

ಅತ್ಯುತ್ತಮ ಕ್ರೀಡಾ ಚಿತ್ರ : ಸ್ವಿಮ್ಮಿಂಗ್ ಥ್ರೋ ದಿ ಡಾರ್ಕ್ನೆಸ್

ಅತ್ಯುತ್ತಮ ಜನಪ್ರಿಯ ಮನೋರಂಜನೆ ಚಿತ್ರ : ಬಧಾಯಿ ಹೋ

ಅತ್ಯುತ್ತಮ ಪರಿಸರ ಸಂರಕ್ಷಣೆ ಚಿತ್ರ : ಪಾನಿ

ಅತ್ಯುತ್ತಮ ಮಕ್ಕಳ ಚಿತ್ರ : ಸರ್ಕಾರಿ ಹಿ.ಪ್ರಾ ಶಾಲೆ ಕಾಸರಗೂಡು (ಕನ್ನಡ)

ಅತ್ಯುತ್ತಮ ಆಕ್ಷನ್ ಚಿತ್ರ : ಕೆಜಿಎಫ್ (ಕನ್ನಡ)

ಅತ್ಯುತ್ತಮ ನಿರ್ದೇಶಕ : ಆದಿತ್ಯ ಧರ್ (ಉರಿ)

ಅತ್ಯುತ್ತಮ ಹಿನ್ನೆಲೆ ಗಾಯಕ : ಅರ್ಜಿತ ಸಿಂಗ್ (ಪದ್ಮಾವತ್)

ಅತ್ಯುತ್ತಮ ಹಿನ್ನೆಲೆ ಗಾಯಕಿ : ಬಿಂದು ಮಣಿ ( ನಾತಿಚರಾಮಿ, ಕನ್ನಡ)

ಅತ್ಯುತ್ತಮ ಛಾಯಾಗ್ರಹಣ : ಉಲು

ಅತ್ಯುತ್ತಮ ಸಂಭಾಷಣೆ : ತಾರೀಖ

ಅತ್ಯುತ್ತಮ ರೂಪಾಂತರಗೊಂಡ ಚಿತ್ರ : ಅಂಧಾಧುನ್

ಅತ್ಯುತ್ತಮ ಮೂಲ ಚಿತ್ರಕಥೆ : ಚಿ ಅರ್ಜನ್ ಲಾ ಸೌ 

ಅತ್ಯುತ್ತಮ ಮಿಕ್ಸ್ ಟ್ರ್ಯಾಕ್ಸ್ : ರಂಗಸ್ಥಳಂ

ಅತ್ಯುತ್ತಮ ಧ್ವನಿ ವಿನ್ಯಾಸ : ಉರಿ

ಅತ್ಯುತ್ತಮ ರೆಕಾರ್ಡಿಂಗ್ ಸ್ಟುಡಿಯೋ : ತೆಂಡ್ಲ್ಯಾ

ಅತ್ಯುತ್ತಮ ಸಂಕಲನ : ನಾತಿಚರಾಮಿ ( ಕನ್ನಡ)

ಅತ್ಯುತ್ತಮ ಚಿತ್ರ ಸಾಹಿತಿ : ಮನ್ಸೂರೆ (ನಾತಿಚರಾಮಿ, ಕನ್ನಡ)

ಅತ್ಯುತ್ತಮ ಉತ್ಪಾದನಾ ವಿನ್ಯಾಸ : ಕಮ್ಮಾರ ಸಂಭವ

ನಟಿ ಶ್ರುತಿ ಹರಿಹರನ್, ಚಂದ್ರಚೂಡ ರಾಯ್, ಜೋಸಿ ಜೋಸೆಪ್, ಸಾವಿತ್ರಿಗೆ ವಿಶೇಷ ಪ್ರಶಸ್ತಿ

ಅತ್ಯುತ್ತಮ ವಸ್ತ್ರವಿನ್ಯಾಸ : ಮಹಾನಟಿ ಚಿತ್ರತಂಡ

ಅತ್ಯುತ್ತಮ ಮೇಕಪ್ : ರಂಜಿತ

ಅತ್ಯುತ್ತಮ ಸಂಗೀತ : ಸಂಜಯ ಲೀಲಾ ಬನ್ಸಾಲಿ (ಪದ್ಮಾವತಿ)

ಅತ್ಯುತ್ತಮ ಹಿನ್ನೆಲೆ ಸಂಗೀತ : ಉರಿ

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ : ಕೆಜಿಎಫ್, ಅವೇ

ಅತ್ಯುತ್ತಮ ಕೊರಿಯೋಗ್ರಫಿ: ಪದ್ಮಾವತ್, ಘೊಮರ್




Leave a Reply

Your email address will not be published. Required fields are marked *

error: Content is protected !!