ಬ್ರೇಕಿಂಗ್ ನ್ಯೂಸ್: ಐಪಿಎಲ್ ಬೆಟ್ಟಿಂಗ್ ವಿಜಯಪುರದಲ್ಲಿ ಮೂವರು ಅರೆಸ್ಟ್

459

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಐಪಿಎಲ್ ಟೂರ್ನಿ ಶುರುವಾದ್ರೆ ಸಾಕು ಬೆಟ್ಟಿಂಗ್ ದಂಧೆ ಜೋರಾಗುತ್ತೆ. ಹೀಗಾಗಿ ಆಗಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುತ್ತಲೇ ಇರ್ತಾರೆ. ಗುಮ್ಮಟನಗರಿಯಲ್ಲಿ ಕಾರಿನಲ್ಲಿ ಕುಳಿತುಕೊಂಡು ಬೆಟ್ಟಿಂಗ್ ನಡೆಸ್ತಿದ್ದ ಮೂವರನ್ನ ಬಂಧಿಸಲಾಗಿದೆ.

ನಗರದ ಸಿಂದಗಿ ನಾಕಾ ಬಳಿ ಪೊಲೀಸರ ದಾಳಿ ನಡೆಸಿ, ಸಚಿನ ಪವಾರ, ದೀಲಿಪ ಬಿರಂಗಿ ಹಾಗೂ ಜಾವೇದ ಹಸನ ಸಾಹಬ ಅನ್ನೋ ಮೂವರನ್ನ ಬಂಧಿಸಲಾಗಿದೆ. ಇನ್ನು ಬಂಧಿತ ಆರೋಪಿಗಳಿಂದ 64,900 ರುಪಾಯಿ ನಗದು, 11 ಮೊಬೈಲ್, ಒಂದು ಡಸ್ಟರ್ ಕಾರ್, ಒಂದು ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಗೋಳಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!