ಆರ್ ಸಿಬಿ ಆಸೆಗೆ ತಣ್ಣೀರು ಎರಚುತ್ತಾ ಮಳೆ?

328

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಲಖ್ನೋ ಸೂಪರ್ ಜಯಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪ್ಲೇ ಆಫ್ 2ನೇ ಪಂದ್ಯ ನಡೆಯುತ್ತಿದೆ. ಆದರೆ, ನಿಗದಿತ ಸಮಯದಂತೆ 7.30ಕ್ಕೆ ಶುರುವಾಗಬೇಕಿದ್ದ ಪಂದ್ಯ ಮಳೆಯಿಂದ ತಡವಾಗಿದೆ.

ಬಹಳ ವರ್ಷಗಳ ನಂತರ ಪ್ಲೇ ಆಫ್ ಗೆ ಬಂದಿರುವ ಆರ್ ಸಿಬಿ ಮೊದಲ ಬಾರಿಗೆ ಕಪ್ಪಿಗೆ ಮುತ್ತಿಕ್ಕಲು ಮೂರು ಪಂದ್ಯ ಗೆಲ್ಲಬೇಕು. ಆದರೆ, ಇದಕ್ಕೆ ಮಳೆ ತಣ್ಣೀರು ಎರಚುತ್ತಾ ಅನ್ನೋ ಅನುಮಾನ ಮೂಡಿದೆ. ಡೆಲ್ಲಿ ವಿರುದ್ಧ ಮುಂಬೈ ಗೆಲುವು ಸಾಧಿಸಿರುವುದರಿಂದ ಪ್ಲೇ ಆಫ್ ಅವಕಾಶ ಪಡೆದ ಆರ್ ಸಿಬಿಗೆ ಮಳೆ ಅಡ್ಡಿಯಾಗುತ್ತಾ ಅನ್ನೋ ಟೆನ್ಷನ್ ಮೂಡಿದೆ.

ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಖ್ನೋ ವಿರುದ್ಧ ಬೆಂಗಳೂರು ಹುಡುಗರು ಕಣಕ್ಕೆ ಇಳಿದಿದ್ದಾರೆ. ಇದರಲ್ಲಿ ಗೆದ್ದವರು ಪ್ಲೇ ಆಫ್ 1ರಲ್ಲಿ ಸೋತ ತಂಡದೊಂದಿಗೆ ಆಡಿ ಗೆದ್ದರೆ ಫೈನಲ್ ಗೆ. ಇಲ್ಲಿ ಸೋತವರು ಟೂರ್ನಿಯಿಂದ ಹೊರಗೆ. ಆರಂಭದಿಂದಲೇ ಭರ್ಜರಿ ಆಟವಾಡುತ್ತಿರುವ ಗುಜರಾತ್ ಟೈಟನ್ಸ್ ಮೊದಲ ಟೂರ್ನಿಯಲ್ಲಿಯೇ ಫೈನಲ್ ಪ್ರವೇಶಿಸಿದೆ. ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ ಅಂತರದಿಂದ ವಿಜಯ ಸಾಧಿಸಿದೆ.




Leave a Reply

Your email address will not be published. Required fields are marked *

error: Content is protected !!