ಜೈಲರ್ ಟೀಂಗೆ ಟೆನ್ಷನ್ ಕೊಟ್ಟ ಸೆನ್ಸಾರ್

172

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೂಪರ್ ಸ್ಟಾರ್ ರಜನಿಕಾಂತ್, ಸೆಂಚುರಿ ಸ್ಟಾರ್ ಶಿವಣ್ಣ, ಯೂನಿವರ್ಸಲ್ ಸ್ಟಾರ್ ಮೋಹನ್ ಲಾಲ್, ಜಾಕಿ ಶ್ರಾಫ್, ಯೋಗಿ ಬಾಬು, ಮಿಲ್ಕಿ ಬ್ಯೂಟಿ ತಮನ್ನಾ, ರಮ್ಯ ಕೃಷ್ಣನ್ ಸೇರಿದಂತೆ ಬಹುದೊಡ್ಡ ತಾರಾ ಬಳಗ ಇರುವ ಜೈಲರ್ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಈಗಾಗ್ಲೇ ಆಡಿಯೋ ರಿಲೀಸ್ ಆಗಿದ್ದು ಭಾರೀ ಸೌಂಡ್ ಮಾಡುತ್ತಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಬಹುಕೋಟಿ ವೆಚ್ಚದ ಜೈಲರ್ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಿದೆ. ಆದರೆ, 11 ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಸೂಚಿಸಿದೆ. ಹೀಗಾಗಿ ಚಿತ್ರ ತಂಡಕ್ಕೆ ಹೊಸ ಟೆನ್ಷನ್ ಶುರುವಾಗಿದೆ.

ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್, ನರಸಿಂಹನಾಗಿ ಶಿವಣ್ಣ, ಮ್ಯಾಥೋ ಆಗಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದಾರೆ. ಈ ಮೂವರೊಂದಿಗೆ ಇರುವ ಕ್ಲೈಮ್ಯಾಕ್ಸ್ ಸೀನ್ ನ ಸಿಗರೇಟ್ ಸೇದುವ ದೃಶ್ಯ ಸೇರಿದಂತೆ 11 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಜೊತೆಗೆ ಮಲಯಾಳಿ ಪದವೊಂದನ್ನು ಮ್ಯೂಟ್ ಮಾಡಲು ತಿಳಿಸಿದೆ.

ತಮಿಳು, ತೆಲುಗು, ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆಗಸ್ಟ್ 10ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗಲು ಸಕಲ ಸಿದ್ಧತೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!