ಗೋಕಾಕ್ ಚಳುವಳಿಗೆ ಮುನ್ನುಡಿ ಬರೆದಿದ್ದು ಸಿಂದಗಿ: ಥೋರ್ಪೆ

245

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕನ್ನಡ ಭಾಷೆಗಾಗಿ ನಡೆದ ಗೋಕಾಕ್ ಚಳವಳಿಗೆ ಮುನ್ನುಡಿ ಬರೆದಿದ್ದು ಸಿಂದಗಿ, ಅದನ್ನು ಪ್ರಾರಂಭಿಸಿದ್ದು ಈ ನೆಲದ ಪತ್ರಕರ್ತ ರೇ.ಚೆ ರೇವಡಿಗಾರ ಎಂದು ಸಂಪನ್ಮೂಲ ವ್ಯಕ್ತಿ ರಂಗನಾಥ ಥೋರ್ಪೆ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಈ ರೀತಿ ಹೇಳಿದರು.

ಗೋಕಾಕ್ ಚಳವಳಿ ನಾಡಿನಲ್ಲಿ ಬಹುದೊಡ್ಡ ಕ್ರಾಂತಿ ಮಾಡಿತು. ಇದರಲ್ಲಿ ಸಾಹಿತ್ಯ, ಸಿನಿಮಾ ರಂಗದ ದಿಗ್ಗಜರು ಭಾಗವಹಿಸಿದರು. ಚಳವಳಿಯ ಭಾಗವಾಗಿ ಡಾ.ರಾಜಕುಮಾರ್ ಅವರು ಸಿಂದಗಿಗೆ ಬಂದು ಸಮಾವೇಶ ಮಾಡಿದಾಗ, ಹೋರಾಟದ ರೂವಾರಿ ಪತ್ರಕರ್ತ ರೇವಡಿಗಾರಿಗೆ ವೇದಿಕೆ ಮೇಲೆ ಅವಕಾಶ ಕಲ್ಪಿಸದೆ ಸಭಿಕರ ಜಾಗದಲ್ಲಿ ಕುಳಿತಿದ್ದು ದುರ್ದೈವದ ಸಂಗತಿ ಅಂತಾ ವಿಷಾದ ವ್ಯಕ್ತಪಡಿಸಿದರು. ಇಂದಿನ ಪತ್ರಕರ್ತರು ಧೀಮಂತ ಪತ್ರಕರ್ತರಾಗದೆ ಶ್ರೀಮಂತ ಪತ್ರಕರ್ತರಾಗುತ್ತಿದ್ದಾರೆ. ಶ್ರೀಮಂತರಾಗುವುದು ಹೇಗೆ ಎಂದು ಅವರಿಗೆ ಗೊತ್ತಿದೆ. ಇದಾಗದೆ ದನಿ ಇಲ್ಲದವರ ದನಿಯಾಗಲು ಸಂಶೋಧನೆಯ ಗುಣ ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಅಂತವರನ್ನು ಗುರುತಿಸಿ ಬೆಳೆಸಬೇಕು ಅಂತಾ ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಇಂದಿನ ಮೊಬೈಲ್ ಯುಗದಲ್ಲಿ ಎಲ್ಲರೂ ಪತ್ರಕರ್ತರಾಗಿದ್ದಾರೆ. ಹೀಗಾಗಿ ಮಾಧ್ಯಮದ ಎದುರು ಸಾಕಷ್ಟು ಸವಾಲುಗಳಿವೆ ಎಂದರು. ನಾಗರಾತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಲ್ಲು ಕೆಂಬಾವಿ, ಪ್ರಾಚಾರ್ಯ ಎನ್.ಆರ್ ಗಂಗನಹಳ್ಳಿ ವೇದಿಕೆ ಮೇಲಿದ್ದರು.

ಜಿಲ್ಲಾ ಘಟಕದ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನಿತರಾದ ಹಿರಿಯ ಪತ್ರಕರ್ತರಾದ ರವಿಚಂದ್ರ ಮಲ್ಲೇದ, ರಮೇಶ ಪೂಜಾರ ಅವರನ್ನು ಗೌರವಿಸಲಾಯಿತು. ಕಾನಿಪ ತಾಲೂಕು ಘಟಕದ ಕಾರ್ಯದರ್ಶಿಯಾಗಿ ಮಹಾಂತೇಶ ನೂಲಾನವರ, ಖಜಾಂಚಿಯಾಗಿ ಭೋಜರಾಜ ದೇಸಾಯಿ ಅವರನ್ನು ನೇಮಕಮಾಡಲಾಯಿತು.

ಈ ವೇಳೆ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಸಾಹಿತಿಗಳಾದ ಡಾ.ಎಂ.ಎಂ ಪಡಶೆಟ್ಟಿ, ಡಾ.ಚನ್ನಪ್ಪ ಕಟ್ಟಿ, ಪ್ರಕಾಶ ಚೌಧರಿ, ರಾಜು ನರಗೋದಿ, ಶ್ರೀಹರಿ ಕುಲಕರ್ಣಿ, ಪತ್ರಕರ್ತರಾದ ಮಲ್ಲಿಕಾರ್ಜುನ ಅಲ್ಲಾಪೂರ, ಶಾಂತವೀರ ಹಿರೇಮಠ, ಗುರುರಾಜ ಮಠ, ನಾಗೇಶ ತಳವಾರ, ಗುಂಡು ಕುಲಕರ್ಣಿ, ಇಸ್ಮಾಯಿಲ್ ಶೇಖ್, ಉಪನ್ಯಾಸಕರಾದ ಜಿ.ಎಸ್.ಮೋರಟಗಿ, ಎಮ್.ಎಮ್.ಯಾಳಗಿ, ಎಸ್.ಎಸ್.ಅವಟಿ, ಎಸ್.ಎಸ್.ಸುರಪುರ, ಜೆ.ಎಮ್.ಗಾಣಿಗೇರ, ಎಮ್.ಎನ್.ಬಿರಾದಾರ ಎ.ಆರ್.ರಜಪೂತ, ಸಿದ್ದು ಮಲ್ಲೇದ, ಸೇರಿದಂತೆ ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!