ನಾಳೆ ಮನೆಯಿಂದ ಹೊರ ಬಂದ್ರೆ ಕೇಸ್: ಪೊಲೀಸ್ ಆಯುಕ್ತರಿಗೆ ಗೃಹ ಸಚಿವರ ಕ್ಲಾಸ್

411

ಬೆಂಗಳೂರು: ಮಾರ್ಚ್ 22ರಂದು ಜನತಾ ಕರ್ಫ್ಯೂ ನ್ನ ಸ್ವಯಂ ಪ್ರೇರಿತವಾಗಿ ಮಾಡಿಯೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದ್ರೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ, ನಾಳೆ ಹೊರ ಬಂದ್ರೆ ಕೇಸ್ ಹಾಕ್ತೀವಿ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಣೆ ಕೇಳಿದ್ದಾರೆ.

ಕೇಸ್ ಹಾವುದಕ್ಕೆ ಅವಕಾಶವಿದ್ಯಾ? ಜನರನ್ನ ಯಾಕೆ ಹೆದರಿಸುವ ಹೇಳಿಕೆ ಕೊಡ್ತೀರಾ? ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲಿ ಇರೋದು ಜನತಾ ಕರ್ಫ್ಯೂ. ಹೀಗೆ ಹೇಳಿಕೆ ಕೊಟ್ಟು ಜನರದಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ನೆರೆ ರಾಜ್ಯಗಳ ಗಡಿ ಭಾಗಗಳನ್ನ ಬಂದ್ ಮಾಡುವುದಿಲ್ಲ. ಬದಲಿಗೆ ಸ್ಕ್ರಿನಿಂಗ್ ಮಾಡುತ್ತೇವೆ. ಹೀಗಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ಮೂರು ದಿನಗಳ ಬಳಿಕ ಸೂಚನೆ ನೀಡಲಾಗುತ್ತೆ ಎಂದಿದ್ದಾರೆ. ಈ ತಿಂಗಳ 31ರ ತನಕ ನೆರೆಯ ರಾಜ್ಯಗಳ ಬಾರ್ಡರ್ ಬಂದ್ ಆಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!