ಪತ್ರಕರ್ತ ರಾಜೀವ ಶರ್ಮಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

258

ಪ್ರಜಾಸ್ತ್ರ ಸುದ್ದಿ

ನವದೆಹಲಿ: ರಕ್ಷಣಾ ಇಲಾಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನ ಹೊಂದಿದ್ದ ಹಾಗೂ ಅವುಗಳನ್ನ ಚೀನಾಗೆ ನೀಡ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ರಾಜೀವ ಶರ್ಮಾ ಸೇರಿದಂತೆ ಮೂವರು ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ದೆಹಲಿಯ ಮೆಟ್ರೋಪಾಲಿಟಿಯನ್ ಮುಖ್ಯನ್ಯಾಯಮೂರ್ತಿ ಪವನ್ ಸಿಂಗ್ ಅವರು, ಮೂವರು ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ 7 ದಿನಗಳ ಕಾಲ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಪತ್ರಕರ್ತ ರಾಜೀವ ಶರ್ಮಾ, ನೇಪಾಳದ ಮೂಲದ ವ್ಯಕ್ತಿ ಹಾಗೂ ಚೀನಾ ಮೂಲದ ಮಹಿಳೆ ಜೈಲು ವಾಸ ಮುಂದುವರೆದಿದೆ.

ವಿದೇಶಾಂಗ ನೀತಿ, ಶಸ್ತ್ರಾಸ್ತ್ರ ಖರೀದಿ, ಸೇನಾ ನಿಯೋಜನೆ ಸೇರಿದಂತೆ ಹಲವು ರಕ್ಷಣಾ ಗೌಪ್ಯತೆಯನ್ನ ಚೀನಾ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡ್ತಿದ್ದ ಆರೋಪದ ಮೇಲೆ ಪತ್ರಕರ್ತ ರಾಜೀವ ಶರ್ಮಾನನ್ನ ಸೆಪ್ಟೆಂಬರ್ 14ರಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೀಗೆ ಮಾಹಿತಿ ನೀಡ್ತಿದ್ದ ಶರ್ಮಾ, ಭದ್ರತಾ ಸಲಹೆಗಾರ ಅಜಿತ್ ದೊವಲ್ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಈ ಹಿಂದೆ ಹಲವು ಲೇಖನಗಳಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!