ಶುರುವಾಯ್ತು ಶೂಟಿಂಗ್ ವರ್ಕ್

265

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕರೋನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗದ ಬಹುತೇಕ ಕೆಲಸಗಳು ಸ್ತಬ್ಧವಾಗಿದ್ದವು. ಈಗ ನಿಧಾನವಾಗಿ ಶೂಟಿಂಗ್ ಕೆಲಸ ಶುರುವಾಗಿದೆ. ಲಾಕ್ ಡೌನ್ ನಿಂದಾಗಿ ಬಿಗ್ ಬಜೆಟ್ ಮೂವಿಗಳಿಗೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಹಂತ ಹಂತವಾಗಿ ಶೂಟಿಂಗ್ ಕೆಲಸ ನಡೆಸುವ ಮೂಲಕ ಒಂದಿಷ್ಟು ಚಟುವಟಿಕೆ ಶುರುವಾಗಿವೆ.

ಪ್ಯಾಂಟಮ್, ಮದಗಜ, ಕೆಜಿಎಫ್-2 ಚಿತ್ರದ ಶೂಟಿಂಗ್ ನಿಧಾನವಾಗಿ ಶುರುವಾಗ್ತಿವೆ. ಕಿಚ್ಚ ಸುದೀಪ ಅಭಿನಯದ, ಅನೂಪ ಭಂಡಾರಿ ನಿರ್ದೇಶನದ ಪ್ಯಾಂಟಮ್ ಮೂವಿ, ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಇದರ ಶೂಟಿಂಗ್ ಕೆಲಸ ನಡೆದಿದೆ. ಇನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ ಅವರ ನಟನೆಯ ಮದಗಜ ಹಾಗೂ ಪ್ರಶಾಂತ ನೀಲ್ ನಿರ್ದೇಶನದ ಕೆಜಿಎಫ್ -2 ಮೂವಿ ಶೂಟಿಂಗ್ ಪ್ಲಾನ್ ನಡೆದಿದೆ.

ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳ ಶೂಟಿಂಗ್ ಶುರುವಾಗ್ತಿದ್ದಂತೆ, ಸಣ್ಣಪುಟ್ಟ ಚಿತ್ರಗಳ ಶೂಟಿಂಗ್ ಸಹ ಶುರುವಾಗಲಿವೆ. ಕೋವಿಡ್ 19 ಮಾರ್ಗಸೂಚಿ ಅನ್ವಯ ಶೂಟಿಂಗ್ ನಡೆಸಲು ಪ್ಲಾನ್ ನಡೆಸಿವೆ.




Leave a Reply

Your email address will not be published. Required fields are marked *

error: Content is protected !!