ಬಸ್ ಗಾಜು ಒಡೆದ ಪ್ರತಿಭಟನಾಕಾರರು

147

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ, ಕರ್ನಾಟಕ ಬಂದ್ ಕರೆ ಕೊಡಲಾಗಿದೆ. ಹೀಗಾಗಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ಸಂಘಟನೆಗಳು ಸಜ್ಜುಗೊಂಡಿದ್ದವು. ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿ ಮಾಡಿ, ಮೆರವಣಿಗೆ, ರ್ಯಾಲಿಗೆ ಅವಕಾಶವಿಲ್ಲ. ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗೆ ಅವಕಾಶ ನೀಡಿದೆ.

ಹೀಗಿದ್ದರೂ ನಗರದ ಟೌನ್ ಹಾಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿ ಅನೇಕರು ಮುಂದಾದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ ಹತ್ತಿಸಿದರು. ಈ ವೇಳೆ ಪ್ರತಿಭಟನಾಕಾರರು ಬಸ್ಸಿನ ಗಾಜು ಒಡೆದಿದ್ದಾರೆ.

ಸಿಲಿಕಾನ್ ಸಿಟಿ ಬಹುತೇಕ ಸ್ತಬ್ಧವಾಗಿದೆ. ಯಾವುದೇ ರೀತಿಯ ವ್ಯಾಪಾರು, ವಹಿವಾಟು ನಡೆಯುತ್ತಿಲ್ಲ. ಸಾರಿಗೆ ಸಂಚಾರದಲ್ಲಿ ವಿರಳತೆ ಇದೆ. ಶಾಲಾ, ಕಾಲೇಜುಗಳಿಗೆ ಈಗಾಗ್ಲೇ ರಜೆ ನೀಡಲಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ನಂಜನಗೂಡು, ಶ್ರೀರಂಗಪಟ್ಟಣ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಂದ್ ಬಿಸಿ ತಟ್ಟಿದೆ. ಉಳಿದಂತೆ ಎಲ್ಲೆಡೆ ಎಂದಿನಂತೆ ಸಹಜ ಜನಜೀವನ ಇದೆ.




Leave a Reply

Your email address will not be published. Required fields are marked *

error: Content is protected !!