ಸಿಬಿಎಫ್ ಸಿ ನಲ್ಲಿ 6.5 ಲಕ್ಷ ರೂ ಲಂಚ ಪಡೆದರು: ನಟ ವಿಶಾಲ್

261

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ನಟ ವಿಶಾಲ್ ನಟನೆಯ ಮಾರ್ಕ್ ಆಂಟೊನಿ ಚಿತ್ರ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಚಿತ್ರದ ವಿಚಾರವಾಗಿ ಭ್ರಷ್ಟಾಚಾರದ ಕುರಿತು ಮಾತನಾಡಿದ್ದಾರೆ. ಮಾರ್ಕ್ ಆಂಟೊನಿ ಚಿತ್ರಕ್ಕೆ ಸಿಬಿಎಫ್ ಸಿ(ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟೀಫಿಕೇಷನ್) ಪಡೆಯಲು 6.5 ಲಕ್ಷ ರೂಪಾಯಿ ಲಂಚ ಕೊಡಬೇಕಾಯಿತು ಎಂದಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತಮಿಳಿನಲ್ಲಿ ಮಾರ್ಕ್ ಆಂಟೊನಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಹಿಂದಿಗೆ ಡಬ್ ಮಾಡಲು ಯೋಚಿಸಿ ಮುಂಬೈನ ಸಿಬಿಎಫ್ ಸಿ ಕಚೇರಿಗೆ ಕಳುಹಿಸಲಾಗಿದೆ. ಆದರೆ, ಅಲ್ಲಿನ ಅಧಿಕಾರಿ ಮೇನಕ ಎಂಬುವರು ಒಂದು ದಿನದಲ್ಲಿ ಸರ್ಟಿಫಿಕೇಟ್ ಬೇಕಂದರೆ 6.5 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟರು. ನಮ್ಮ ತಂಡದವರು ಅವರು ಖಾತೆಗಳಿಗೆ ಹಣ ಹಾಕಿದ ಬಳಿಕ ಸರ್ಟಿಫಿಕೇಟ್ ಸಿಕ್ಕಿತು.

ಸಿನಿಮಾದಲ್ಲಿ ಭ್ರಷ್ಟಾಚಾರದ ಕುರಿತು ನಾವೇ ತೋರಿಸುತ್ತೇವೆ. ಇದೀಗ ನಾವೇ ಅದನ್ನು ಎದುರಿಸಬೇಕಾಗಿದೆ. ಓರ್ವ ಸ್ಟಾರ್ ನಟನಾಗಿಯೇ ನಾನು ಇಷ್ಟೊಂದು ಎದುರಿಸಿದ್ದೇನೆ. ಹೊಸಬರ ಪ್ರಶಸ್ತಿ ಏನು ಎಂದು ಪ್ರಶ್ನಿಸಿದ್ದು, ಈ ಸಂಬಂಧ ನನ್ನಲ್ಲಿ ಎಲ್ಲ ರೀತಿಯ ದಾಖಲೆಗಳಿವೆ. ಮಹಾರಾಷ್ಟ್ರದ ಸಿಎಂ, ಪ್ರಧಾನಿ ಮೋದಿ ಈ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!